ಕಲಬುರಗಿ/ ಕಾಳಗಿ : ಪಟ್ಟಣದ ಹಳೆಯ ಬಸ್ ಸ್ಟ್ಯಾಂಡ್ ದ ರಸ್ತೆಯಲ್ಲಿ ಜನಗಳಿಗೆ ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಹಳೆಯ ಬಸ್ ಸ್ಟಾಂಡ್ ಎದುರುಗಡೆ ಟ್ರಾಫಿಕ್ ಸಮಸ್ಯೆ ತುಂಬಾ ಎದುರಾಗುತ್ತಿದೆ. ಇಲ್ಲಿ ಹಲವು ಸಮಸ್ಯೆಗಳು ಇರುವುದರಿಂದ ಸರ್ಕಾರಿ ಬಸ್ಸುಗಳ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲಿ ಅನಾಹುತ ಆದರೆ ಇದಕ್ಕೆ ಯಾರು ಹೊಣೆಗಾರರು ಎಂಬ ಮಾತನ್ನು ಇಂದ್ರಜಿತ್ ಕಟ್ಟಿಮನಿ ಬಿಜೆಪಿ ಯುವ ಮುಖಂಡರು ಕಾಳಗಿ ಇವರು ಅಭಿಪ್ರಾಯಪಟ್ಟಿದ್ದಾರೆ.
ವರದಿ ಚಂದ್ರಶೇಖರ್ ಆರ್. ಪಾಟೀಲ್

















