ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಡಿನಾಡು ಕನ್ನಡತಿ ಡಾ. ಹೇಮಾವತಿ ಸೊನೊಳ್ಳಿಯವರ ಸಾಧನೆಯ ಒಂದು ಕಿರುನೋಟ.

ಗಡಿನಾಡು ಜಿಲ್ಲೆ ಬೆಳಗಾವಿ ಸಾಹಿತ್ಯ ರಾಜಕೀಯ ಕೈಗಾರಿಕೆ ಶಿಕ್ಷಣ ವೈದ್ಯಕೀಯ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಳಗಾವಿ ಜಿಲ್ಲೆಯ ಡಾ.ಹೇಮಾವತಿ ಸೊನೊಳ್ಳಿಯವರು ಜಿಲ್ಲೆಯ ಬಹುಮುಖ ಪ್ರತಿಭೆ ಶಿಕ್ಷಣ ಸಾಹಿತ್ಯ ಸಾಮಾಜಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ಇವರು ಖಾನಾಪೂರ ಸುಪ್ರಸಿಧ್ಧ ವ್ಯಾಪಾರಸ್ಥ ಮನೆತನದಲ್ಲಿ ಜನಸಿರುವ ಇವರು ತಂದೆ ದುಂಡಪ್ಪ ತಾಯಿ ಶಕುಂತಲಾ ದಂಪತಿಗಳ ಮುದ್ದಿನ ಮಗಳು ಒಂದ ರಿಂದ ಎರಡನೆಯ ತರಗತಿ ಖಾನಾಪೂರ ಹಾಗೂ ನಂದಗಡದಲ್ಲಿ ಮುಗಿಸಿ ಮೂರನೇಯ ತರಗತಿಯಿಂದ ಬಿ.ಎ.ಪದವಿ ಚನ್ನಮ್ಮ ಕಿತ್ತೂರ ದಲ್ಲಿ ಶಿಕ್ಷಣ ಪಡೆದರು. 1984 ರಲ್ಲಿ ಎಂ.ಎ ಪದವಿ ಪಡೆದರು.
1984ರಿಂದ ಇವರು ನಂದಗಡದ ಎನ್.ಆರ್.ಇ.ಸ೦ಸ್ಥೆಯ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಹಾಗೂ ಪ್ರಾಂಶುಪಾಲರಾಗಿಸೇವೆ ಮಾಡಿ 2014ರಲ್ಲಿ ಸ್ವಯಂ ನಿವೃತ್ತಿ ಪಡೆದರು. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ಉತ್ತಮ ಮೌಲ್ಯ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಮಾದರಿಯಾದರು.ನಂದಗಡ ಮಹಾತ್ಮ ಗಾಂಧಿ ಪಿ.ಯೂ ವಿದ್ಯಾಲಯದ ಗ್ರಂಥಾಲಯಕ್ಕೆ ಎರಡು ಲಕ್ಷ ದೇಣಿಗೆ ನೀಡಿ ನೀಡಿದ್ದಾರೆ.

ಸಾಹಿತ್ಯ ಕೃಷಿ

ಚುಟುಕು ಚಂದ್ರಿಕೆ. ಸೃಷ್ಟಿ. ಕಂದಾ ಎಲ್ಲಿರುವೆ? ಸ್ಪ೦ದನ ದೈವದಾಟ ತಂತುರು ಹೇಮ ಸಿರಿ. ಬಂಗಾರಗೊಂಬೆ ಹೀಗೆ ಅನೇಕ ಸಂಕಲನ ಬಿಡುಗಡೆ ಮಾಡಿದ್ದಾರೆ.ಸಮಾಗಮ.ಸ೦ಯುಕ್ತ ದಾಸೋಹಂ ಅನೇಕ ಕೃತಿ ಸಂಪಾದಿಸಿದ್ದಾದ್ದಾರೆ. ವಿವಿ ವಿವಿಧ ಲೇಖನ ಕವನ ಅಂಕಣ ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಆಕಾಶವಾಣಿ ವೇಣು ಧ್ವನಿ ಬಾನುಲಿಯಲ್ಲಿ ಭಾಗವಹಿಸಿದ್ದಾರೆ.ತಾಲೂಕ ಜಿಲ್ಲಾ ರಾಜ್ಯ ಮಟ್ಟದ ಕನ್ನಡಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಚ೦ದನ ವಾಹಿನಿಯಲ್ಲಿ ಕವನ ವಾಚನ ಮಾಡಿದ್ದಾರೆ. ಗಡಿನಾಡು ಉತ್ಸವ ಕಿತ್ತೂರ ಉತ್ಸವ, ಕದಂಬೋತ್ಸವದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ರಾಜ್ಯ ಬರಹಗಾರರ ಸಂಘದ ಪ್ರಧಾನ ಸಮಾರಂಭದ ಸರ್ವಾಧ್ಯಕ್ಷರು ಆಗಿರುವ ಇವರಿಗೆ
ವಿವಿಧ ಸಂಘ ಸಂಸ್ಥೆಗಳುಮಠಗಳು ಮಹಿಳಾ ಸಂಘಟನೆಗಳು.
ನೀಲಗಂಗಾ ದತ್ತಿ ಪ್ರಶಸ್ತಿ ಸಿರಿಗನ್ನಡ ಪ್ರಶಸ್ತಿ ರಾಷ್ಟೀಯ ಸಾಹಿತ್ಯರತ್ನ ಪ್ರಶಸ್ತಿ ಬೆಳಗಾವಿ ಜಿಲ್ಲಾ ಸಾಹಿತ್ಯಪ್ರತಿಷ್ಠಾನ ಪ್ರಶಸ್ತಿ. ಅಕ್ಕಮಹಾದೇವಿ ಪ್ರಶಸ್ತಿ ಕಿತ್ತೂರ ರಾಣಿ ಚಿನ್ನಮ್ಮ ಪ್ರಶಸ್ತಿ. ಹೆಮ್ಮೆಯ ಕನ್ನಡತಿ. ಕನ್ನಡಶ್ರೀ ವಿಶ್ವಚೇತನ ಗೌರವ ಪಿ. ಎಚ್.ಡಿ. ಪದವಿ ನೀಡಿ ಗೌರವಿಸಲಾಗಿದೆ.
ಸ್ಥಾನಮಾನ..
ಖಾನಾಪೂರ ತಾಲೂಕ ಕ . ಸಾ.ಪ ಹಾಗೂ ಜಿಲ್ಲಾ ಕ.ಸಾ.ಪ ಸದಸ್ಯರಾಗಿ ಸೇವೆ.
ಪೃಥ್ವಿ ಪೌ೦ಡೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಖಿಲ ಭಾರತ ಕವಯತ್ರಿಯರ ಸಂಘದ ಸದಸ್ಯರಾಗಿ ಸೇವೆ.
ಜ್ಞಾನಪೀಠಪ್ರಶಸ್ತಿ ವಿಜೇತರು ಕೇಂದ್ರ ಸಾಹಿತ್ಯ ಆಕಾಡೆಮಿ ಮಾಜಿ ಅಧ್ಯಕ್ಷರಾದ ಡಾ.ಚಂದ್ರಶೇಖರ್ ಕ೦ಬಾರಯವರ ಹುಟ್ಟೂರಾದ ಘೋಡ ಗಿರಿಯಲ್ಲಿ ನವೆಂಬರ್ 24ರಂದು ನಡೆಯುವ ಬೆಳಗಾವಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿರುವ ಡಾ.ಹೇಮಾವತಿ ಸೊನೊಳ್ಳಿಯವರಿಗೆ ಗಡಿನಾಡು ಕನ್ನಡ ಮನಸುಗಳ ಪರವಾಗಿ ತುಂಬು ಹೃದಯದ ಅಭಿನಂದನೆಗಳು.

ಲೇಖಕರು. ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!