ಬಿ .ಎಸ್. ಪಿ. ರಾಜ್ಯ ಕಾರ್ಯದರ್ಶಿ ಜ್ಞಾನೇಶ್ವರ ಸಿಂಗಾರೆ ಹೇಳಿಕೆ.
ಬೀದರ್ ಜಿಲ್ಲೆ ಬಸವಕಲ್ಯಾಣ ನಗರಸಭೆಯಲ್ಲಿ ಸುಮಾರು 7 ರಿಂದ 8 ಕೋಟಿ ರೂಪಾಯಿಗಳವರೆಗೆ ಅವ್ಯವಹಾರ ನಡೆದಿರುವ ಬಗ್ಗೆ ಬಹುಜನ ಸಮಾಜ ಪಾರ್ಟಿ ವತಿಯಿಂದ ನಗರಸಭೆಯಲ್ಲಿ ಭ್ರಷ್ಟಾಚಾರ ಮಾಡಿದ ಪೌರಾಯುಕ್ತ ಅಧಿಕಾರಿಗಳ ವಿರುದ್ಧ BKDB ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಜ್ಞಾನೇಶ್ವರ ಸಿಂಗಾರೆ, ಜಿಲ್ಲಾಧ್ಯಕ್ಷರು ಅಶೋಕ ಮಂಠಾಳಕರ, ತಾಲೂಕ ಅಧ್ಯಕ್ಷರು ಶಂಕರ ಫುಲೆ, ತಾಲೂಕ ಸಂಯೋಜಕರು ಮಕ್ಬುಲ ಸಾಬ , ಮತ್ತೊಬ್ಬ ತಾಲೂಕ ಸಂಯೋಜಕರು ದತ್ತು ಸುಂಠಾಣೆ, ತಾಲೂಕ ಉಪಾಧ್ಯಕ್ಷರು ರಮೇಶ ರಾಠೋಡ, ಇನ್ನೊಬ್ಬ ತಾಲೂಕ ಉಪಾಧ್ಯಕ್ಷರು ಸಚಿನ ಕಾಂಬಳೆ, ತಾಲೂಕ ಪ್ರಧಾನ ಕಾರ್ಯದರ್ಶಿ ರವಿ ಉದಾತೆ, ತಾಲೂಕ ಕಾರ್ಯದರ್ಶಿ ಮಹಾದೇವ ಗಾಯಕವಾಡ, ನಗರ ಘಟಕ ಸಂಯೋಜಕ ಮಸ್ತಾನ ಸಾಬ ಲದ್ದಾಫ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















