ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಶ್ರೀ ಲಲಿತಾನಂದನಾಥ” ನಾದ “ಆಶೀರ್ವಾದ ಐರಣಿ”

ಸಿರುಗುಪ್ಪ:ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಪತ್ರಕರ್ತ ರಾಜೀವ ಐರಣಿ ಇವರ ಏಕೈಕ ಸುಪುತ್ರ ಆಶೀರ್ವಾದ ಐರಣಿ ತನ್ನ ಹತ್ತನೇ ವಯಸ್ಸಿನಲ್ಲಿ ವೇದಾಧ್ಯಯನದಲ್ಲಿ ಆಸಕ್ತಿ ಮೂಡಿಸಿಕೊಂಡು ಕನಕಪುರ ಬಳಿಯ ಓಂ ಶಾಂತಿಧಾಮ ವೇದ ಗುರುಕುಲದಲ್ಲಿ ಶಿಕ್ಷಣಾರ್ಥಿಯಾದರು ರಾಜ್ಯ ಸರ್ಕಾರಿ ಪಠ್ಯಕ್ರಮದ ಜೊತೆಗೆ ವೇದಧ್ಯಾಯನ ಮಾಡಿದರು. ಇದಕ್ಕೂ ಮೊದಲೇ ಶ್ರೀ ಯೋಗಾತ್ಮಾನಂದರಿಂದ ಬಾಲಪಾಠ ಪಡೆದಿದ್ದ ಕಾರಣ ಕಲಿಕೆ ಸುಗಮವಾಗಿತ್ತು
ಗುರುಕುಲದಲ್ಲಿನ ಗುರುಮಾತೆ ಲಕ್ಷ್ಮಾಂಬಾ ಇವರಿಂದ ಬ್ರಹ್ಮವಿದ್ಯಾದೀಕ್ಷೆ ಮತ್ತು ಯೋಗದರ್ಶನ,ಉಪನಿಷತ್ ಹಾಗೂ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿದರು.
ಪದವಿ ಪೂರ್ವ ಶಿಕ್ಷಣಕ್ಕಾಗಿ ಮೈಸೂರು ನಗರದಲ್ಲಿ ಉನ್ನತ ಶಿಕ್ಷಣ ಜೊತೆಗೆ ಸಾಮವೇದ ಅಧ್ಯಯನ ಮಾಡುತ್ತಾ ಹೀಲಿಂಗನ್ನೂ ಅಧ್ಯಯನ ಮಾಡುತ್ತಾ ಪದವೀಧರರಾಗುತ್ತಾರೆ.
ಈ ಶುಭ ಕೃತ ನಾಮ ಸಂವತ್ಸರದ ಗುರು ಪೌರ್ಣಮಿಯಂದು ತಮಿಳುನಾಡಿನ ಚೆನ್ನೈ ನಗರದ ತಾಂಬರಮ್ ಪ್ರದೇಶದ ಶ್ರೀಗುರು ಸನ್ನಿಧಾನದಲ್ಲಿ 40ಕ್ಕೂ ಹೆಚ್ಚು ಪಂಡಿತರ ಹಾಗೂ ಉಪಾಸಕರುಗಳ ಸಮ್ಮುಖದಲ್ಲಿ ಶ್ರೀ ಗುಹಾನಂದನಂದನಾಥ ಪರಂಪರಾಪ್ರಾಪ್ತ ಪರಮಹಂಸಿಕಾ ಶ್ರೀಚಂಪಕಾಂಬಾ ಪರಮಗುರು ಅನುಗ್ರಹದಿಂದ ಶ್ರೀಗಗನಾಂಬಿಕಾ ಸಹಿತ ಶ್ರೀಗಗನಾನಂದನಾಥ ಶ್ರೀಗುರುಗಳಿಂದ ಪೂರ್ಣಾಭಿಷೇಕ ಪಡೆದು ಇದೀಗ ಶ್ರೀಲಲಿತಾಾನಂದನಾಥ ಹೆಸರಿನಲ್ಲಿ ಪೂರ್ಣಾಭಿಷೇಕ ಗೊಂಡಿರುತ್ತಾರೆ.
ಇದೀಗ ದೇದಿಪ್ಯಮಾನ ಸಾಧನೆಯ ಅರ್ಹತೆಗೆ ಪಾತ್ರರಾಗಿದ್ದು ಧನ್ಯತೆಯ ಭಾವ ಎಲ್ಲರಲ್ಲೂ ಮೂಡುವಂತಾಗಿದೆ.ಇವರನ್ನು ಅನೇಕ ಉಪಾಸಕರು ವಿದ್ವಾಂಸರುಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದು ಕಿರಯ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿದ ಇವರು ಇನ್ನು ಹೆಚ್ಚಿನ ಕೊಡುಗೆಗಳನ್ನು ಲೋಕಕ್ಕೆ ನೀಡಲಿ ಎಂದು ಆಶೀರ್ವಾದ ಪೂರಕವಾಗಿ ಹರಸಿರುತ್ತಾರೆ.
ವರದಿ:ಎಂ.ಪವನ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!