ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಲ್ಯಾಣ ಕರ್ನಾಟಕವನ್ನು ಹಸಿರುಮಯಗೊಳಿಸಲು ಅಮರೇಗೌಡ ಮಲ್ಲಾಪೂರ ಕರೆ

ಸಿಂಧನೂರು ತಾಲೂಕಿನ ತಿಮ್ಮಾಪೂರ ಗ್ರಾಮದ ಸೂಗೂರೇಶ ಹಿರೇಮಠ ಅವರ ಸುಪುತ್ರನ ನಾಮಕರಣ ಕಾರ್ಯಕ್ರಮದ ಅಂಗವಾಗಿ ಕುಟುಂಬದ ವತಿಯಿಂದ 101ಸಸಿಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಮಹಾಂತಸ್ವಾಮೀಜಿ ಕಲ್ಯಾಣಾಶ್ರಮ ಮುದಗಲ್ ಅವರು ಸಸಿಗಳನ್ನು ವಿತರಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕವನ್ನು ಹಸಿರು ಕ್ರಾಂತಿ ಮಾಡುವಲ್ಲಿ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ಶ್ಲಾಘನೀಯ,ಸಸಿಗಳನ್ನು ಬೆಳಸಿ,ರಕ್ಷಣೆ ಮಾಡುವುದು, ಜೀವ ಇಲ್ಲದ ಆಲದ ಮರಕ್ಕೆ ಮರುಜೀವ ನೀಡುವುದು ಅದಕ್ಕೆ ಪೂಜ್ಯರುಗಳಿಂದ ಅಮರ ಶ್ರೀ ಎಂದು ನಾಮಕರಣ ಮಾಡಿರುವುದು ತುಂಬಾ ಹೆಮ್ಮೆಯ ಸಂಗತಿ.ಇಂತಹ ಪ್ರಕೃತಿ ಮಾತೆಯ ಸೇವಕನಿಗೆ ದೇವರು ಇನ್ನಷ್ಟು ಪ್ರಕೃತಿ ಮಾತೆಯ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.

ನಂತರ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ಮಾತನಾಡಿ ಕಲ್ಯಾಣ ಕರ್ನಾಟಕದಾದ್ಯಂತ ವನಸಿರಿ ಫೌಂಡೇಶನ್ ವತಿಯಿಂದ ಸಸಿಗಳನ್ನು ನೆಡುವ ಮೂಲಕ ಈ ಭಾಗದವನ್ನು ಹಚ್ಚ ಹಸಿರುಗೊಳಿಸಲು ಶ್ರಮಿಸುತ್ತಿದ್ದೇವೆ. ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು ಪೋಷಣೆ ಮಾಡಿದರೆ ಮನೆಗೊಂದು ಮರ ಊರಿಗೊಂದು ವನ ನಿರ್ಮಾಣವಾಗುತ್ತದೆ ಈ ದೃಷ್ಟಿಯಿಂದ ಇಂದು ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಒಂದೊಂದು ಸಸಿಯನ್ನು ನೀಡಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಈ ಒಂದೊಂದು ಸಸಿಯನ್ನು ನೆಟ್ಟು ಕಾಳಜಿ ವಹಿಸಿ ಪೋಷಣೆ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಮಹಾಂತಸ್ವಾಮೀಜಿ ಕಲ್ಯಾಣಾಶ್ರಮ ಮುದಗಲ್,ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಹಾಗೂ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ,ಸೂಗೂರೇಶ ಹಿರೇಮಠ,ಶರಣಯ್ಯಸ್ವಾಮಿ ಹಿರೇಮಠ,ವನಸಿರಿ ಫೌಂಡೇಶನ್ ಸದಸ್ಯರು, ಹಿರೇಮಠ ಕುಟುಂಬದ ಬಂಧುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!