ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರದ ಎರಡನೆಯ ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಮಂಜುಳಾ ಪಾಟೀಲ್ ಮಾತಾನಾಡಿ ತಾಯಂದಿರು ಹಾಗೂ ಗರ್ಭಿಣಿಯರಿಗೆ ತಾಯಿಯ ಹಾಲಿನ ಮಹತ್ವ ಬಗ್ಗೆ ಹಾಗೂ ಶಿಶು ಪಾಲನೆ ಪೋಷಣೆ ಬಗ್ಗೆ ಕಾಲಕಾಲಕ್ಕೆ ಲಸಿಕೆ ಹಾಕುವ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ವೈದ್ಯರಾದ ಶ್ರೀಮತಿ ಮಂಜುಳಾ ಪಾಟೀಲ್,ರಮ್ಯಾ ಮೇಡಂ ಹಾಗೂ ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಗೀತಾ ಬಾಯಿ ದೀಕ್ಷಿತ್ ಶ್ರೀಮತಿ ಎಚ್ ಶಾಂತಮ್ಮ ಮತ್ತು ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಕಮಲಮ್ಮ ಮತ್ತು ಕಂತೆಮ್ಮ ಹಾಗೂ ಗರ್ಭಿಣಿ ತಾಯಂದಿರು ಮಕ್ಕಳು ಭಾಗಿ ಇದ್ದರು.




















