ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕರಾದ ಎಸ್ ಎನ್ ಸುಬ್ಬಾರೆಡ್ಡಿ ಅವರಿಂದ ಚುನಾವಣಾ ಪ್ರಚಾರವು ಅದ್ದೂರಿಯಾಗಿ ನೆರವೇರಿತು ನೂರಾರು ಕಾರ್ಯಕರ್ತರೊಂದಿಗೆ ಚೋಳೂರಿನಲ್ಲಿ ಜನಸಾಗರವೇ ತುಂಬಿತ್ತು ಈ ಸಂದರ್ಭದಲ್ಲಿ ಮಾತನಾಡಿದ ಸುಬ್ಬ ರೆಡ್ಡಿ ಬಾಗೇಪಲ್ಲಿ ತಾಲೂಕ್ ಅಭಿವೃದ್ಧಿ ಆಗಿಲ್ಲವೆಂದು ಕೆಲವರು ಹೇಳುತ್ತಾರೆ ಅಭಿವೃದ್ಧಿ ಇಲ್ಲ ಅಂದರೆ ಚೋಳೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆಗುತ್ತಿತ್ತ? ಚೋಳರಿನಲ್ಲಿ ಡಬಲ್ ರೋಡ್ ಮಾಡಿಸಿದ್ದೆ ನಾವು ಪ್ರತಿಯೊಂದು ಗ್ರಾಮದಲ್ಲಿ ಸಿಮೆಂಟ್ ರಸ್ತೆ ನೀರಿನ ಘಟಕಗಳು ಇನ್ನು ತುಂಬಾನೇ ಕಾಮಗಾರಿಗಳು ಆಗಿದ್ದಾವೆ ಇಷ್ಟು ಎಲ್ಲಾ ರೀತಿಯ ಅಭಿವೃದ್ಧಿ ಮಾಡಿದರು ಬಿಜೆಪಿ ಪಕ್ಷದ ಮುನಿರಾಜನವರು ಯಾವುದೇ ಅಭಿವೃದ್ಧಿ ಆಗಿಲ್ಲವೆಂದು ಮಾತನಾಡುತ್ತಾರೆ.ಚೇಲೂರಿ ತಾಲೂಕಿನಲ್ಲಿ ತಾಲೂಕು ಕಚೇರಿಯನ್ನು ತಾಲೂಕ ಘೋಷಣೆ ಮಾಡಿಸಿದ್ದು ನಾವು ತಾಲೂಕು ಆಫೀಸನ್ನು ಮಾಡಿಸಿದ್ದು ನಾವು ಆದರೆ ಉದ್ಘಾಟನೆ ಮಾಡಿದ್ದು ಯಾರೋ ಬಂದು ಮಾಡಿದ್ದರು ಯಾರದೋ ಮಗುಗೆ ಯಾರು ಅಂತ ಹೇಳಿಕೊಳ್ಳುವಂತಹ ಜನ ಅವರು ಎಂದು ಅವರ ಬಗ್ಗೆ ವ್ಯಂಗ್ಯ ಮಾಡಿದರು ಅದೇ ರೀತಿ ಮುನಿರಾಜು ರೌಡಿಸಂ ಮಾಡುತ್ತಾರೆ ಆ ರೌಡಿಸಂ ಆನೆಕಲ್ಲು ಸರ್ಜಾಪುರದಲ್ಲಿ ಇಟ್ಟುಕೊಳ್ಳಿ ನಮ್ಮ ಚೇಳೂರಿನಲ್ಲಿ ನಡೆಯಲ್ಲ ಎಂದು ಸಹ ತಿಳಿಸಿದರು ದೇವರ ಮೇಲೆ ಪ್ರಮಾಣ ಮಾಡಿ ನನಗೆ ಈ ರಾಜಕೀಯ ಅವಶ್ಯಕತೆ ಇಲ್ಲ ನಾನು ಜನರ ಸೇವೆ ಮಾಡಬೇಕು ಎಂದು ನಿಮಗೋಸ್ಕರನೇ ಈ ರಾಜಕೀಯ ಮಾಡುತ್ತಿದ್ದೇನೆ ಎಂದು ನಿಮಗೆ ಯಾವುದೇ ಕಷ್ಟ ಬಂದರೆ ನಾನು ನಿಮ್ಮ ಮನೆ ಮಗನಂತೆ ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆಯನ್ನು ನೀಡಿದರು.
ವರದಿ.ರಾಮಾಂಜಿನಪ್ಪ ಬಾಗೇಪಲ್ಲಿ




















