ವಡಗೇರಾ ತಾಲೂಕಿನ ಕಂದಳ್ಳಿ ಗ್ರಾಮದ ಭೀಮಾ ಬ್ರಿಜ್ ಕಂ ಬ್ಯಾರೇಜ್ ಗೆ ನೂತನ ವಿದ್ಯುತ್ ಚಾಲಿತ ಗೇಟಗಳು ಅಳವಡಿಸುವಂತೆ ಒತ್ತಾಯಿಸಿ ಮಾಜಿ ತಾಲೂಕ ಪಂಚಾಯತ್ ಸದಸ್ಯ ಮರಿಲಿಂಗಪ್ಪ ಸಾಹುಕಾರ ಕುಮನೂರು ನೇತೃತ್ವದಲ್ಲಿ ಯಾದಗಿರಿ ಮತಕ್ಷೇತ್ರದ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ರವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ಈಗಿರುವ ಗೇಟ್ ಗಳು ತುಂಬಾ ಹಳೆಯದಾಗಿದ್ದು ನೀರು ಸೋರಿಕೆ ಪ್ರಮಾಣ ಹೆಚ್ಚಾಗುತ್ತಿದೆ ಇದರಿಂದ ತುಂಬಾ ನೀರು ಪೋಲಾಗುವುದರ ಜೊತೆಗೆ ಸುಮಾರು 15 ಕ್ಕೂ ಹೆಚ್ಚು ಗ್ರಾಮಗಳ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಮೊದಲು ಅಳವಡಿಸಿದ ಗೇಟುಗಳು ಸುಮಾರು ವರ್ಷಗಳು ಕಳೆದಿವೆ ಮತ್ತು ತುಕ್ಕು ಹಿಡಿದಿವೆ ಪ್ರವಾಹ ಉಂಟಾದಾಗ ಕೆಲವೊಂದು ಗೇಟ್ ಗಳು ತೆಗೆಯಲು ಬಾರದ ಸ್ಥಿತಿಯಲ್ಲಿವೆ ನೀರಿನ ಪ್ರಮಾಣ ಹೆಚ್ಚಾದಾಗ ಬ್ರಿಜ್ಜಿನ ಹಿನ್ನೀರು ಹೊಲಗದ್ದೆಗಳು ಗ್ರಾಮಗಳಿಗೆ ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯು ಕೂಡಾ ಆಗಿದೆ ಆದ್ದರಿಂದ ತಾವುಗಳು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ನೂತನ ತಂತ್ರಜ್ಞಾನದ ಎಲೆಕ್ಟ್ರಿಕಲ್ ಗೇಟಗಳು ಅಳವಡಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಆದಷ್ಟು ಬೇಗ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಆದಷ್ಟು ಬೇಗನೆ ನೂತನ ಗೇಟ್ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ತಾಲೂಕ ಅಧ್ಯಕ್ಷ ಅಯ್ಯಣ್ಣ ಜೇರಬಂಡಿ,ಹಾಲಗೇರಾ ಗ್ರಾಮ ಪಂಚಾಯತ್ ಅಧ್ಯಕ್ಷ,ಭೀಮರಾಯ ಕುಮನೂರ,ರಾಮನಗೌಡ ಅರ್ಜುಣಗಿ, ಹಣಮಂತರಾಯ ಬಾಗಲಿ ಕಂದಳ್ಳಿ,ಸಿದ್ದಪ್ಪ ಕರೆಳ್ಳಿ,ಮೈಬೂಬ್ ಪಟೇಲ್,ಕುಮಲಪ್ಪ ಕಾವಲಿ, ಜಗದೀಶ್ ವಿಶ್ವಕರ್ಮ,ನಾಗೇಶ್ ರಾವ್ ಕುಮನೂರ ರೈತ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ




















