ಬೆಳಗಾವಿ :ದಿನಾಂಕ 19/09/2025 ರಂದು ಅಥಣಿ ನಗರದ ಸತ್ತಿ ರಸ್ತೆಯಲ್ಲಿರುವ ರಾಯಲ್ ಹಾಲ್’ನಲ್ಲಿ ನಡೆದ ಅಥಣಿ ತಾಲೂಕಾ ಅಭಿಯಂತರ ಹಾಗೂ ಗುತ್ತಿಗೆದಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಅಭಿಯಂತರರ ದಿನಾಚರಣೆ ಸಮಾರಂಭವನ್ನು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ಸರ್ ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮೂಲಕ ಹಾಗೂ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಅಭಿಯಂತರರು ಹಾಗೂ ಗುತ್ತಿಗೆದಾರರಿಂದ ಸತ್ಕಾರ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಡಾ|| ಅನಿಕೇತ ಕತವಾರೆ ಸಹಾಯಕ ಉಪನ್ಯಾಸಕರು ಧಾರವಾಡ, ಶ್ರೀ ನಾಗರಾಜ ಬಿ,ಎ,ಅಧೀಕ್ಷಕ ಅಭಿಯಂತರರು, ಶ್ರೀ ರಾಜೇಶ ಟೋಪಗಿ, ಅಭಿಯಂತರರು, ಶ್ರೀ ಪ್ರವೀಣ ಹುಣಸೀಕಟ್ಟಿ ಕಾರ್ಯನಿರ್ವಾಹಕ ಅಭಿಯಂತರರು ಅಥಣಿ, ಶ್ರೀ ರಾಜೇಶ ಆಲಬಾಳ ಗುತ್ತಿಗೆದಾರರು,ಶ್ರೀ ಶ್ರೀಧರ ಚವ್ಹಾಣ, ಅಭಿಯಂತರರಾದ ಸತೀಶ್ ಹಿರೇಮನಿ, ಹಾಗೂ ಇನ್ನೂ ಅನೇಕ ಅಭಿಯಂತರರು ಹಾಗೂ ಗುತ್ತಿಗೆದಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅದಲ್ಲದೆ ಹಿರಿಯ ಮುಖಂಡರು ಮತ್ತು ಗುತ್ತಿಗೆದಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ, ಅಥಣಿ.




















