ಕೇಳಲು ಬರುವನು
ಮನೆ ಬಾಗಿಲಿಗಿವನು
ನಿಮ್ಮ ಮತ “ನನಗೇ ಕೊಡಿರೆಂದು,”
ಹೇಳುತ್ತಾನಿವನು,
ಜನ ನಾಯಕ ತಾನು.
ಕಾಯುತ್ತೇನೆ ನಿಮ್ಮ ಹಿತ,
ಗೆದ್ದು ಬಂದು,
ಮರೆಯುತ್ತಾನೆ ಜನ ಹಿತ,
ಮೆರೆಯುತ್ತಾನೆ ಸ್ವ ಹಿತ.
ಶಾಸಕನಾಗಿ ಮೆರೆವನಿವ ಗೆದ್ದು
ಇಂಥವನ ಗೆಲ್ಲಿಸಿ ಕಳಿಸಿ,
ಮರುಗುತಿರುವೆವು ನಾವಿಂದು!
ನಮ್ಮ ಬೆನ್ನಿಗೆ ನಮ್ಮದೇ ಕೈಗುದ್ದು!
ಯಾರನ್ನು ಶಪಿಸಿದರೂ
ತಟ್ಟದಾಗಿದೆ ಶಾಪ,
ಅಂದು ಕೊಳ್ಳಬೇಕಾಗಿದೆ,
ನಮಗೆ ನಾವೇ
“ಅಯ್ಯೋ ಪಾಪ “!.
- ಶಿವಪ್ರಸಾದ್ ಹಾದಿಮನಿ.✍️
ಕನ್ನಡ ಉಪನ್ಯಾಸಕರು.
ಕೊಪ್ಪಳ. 583231.




















