ಮಂಗಳೂರು: ತಾಲ್ಲೂಕಿನ ಇರ ಗ್ರಾಮದ ಶ್ರೀ ನೇಮು ಪೂಜಾರಿ ಇವರಿಗೆ ಕೇರಳ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ದಿನಾಂಕ 22.2.2026 ರಂದು ಕವಿ ಕಾವ್ಯ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಡಾಕ್ಟರ್ ವಾಮನ್ ರಾವ್ ಬೇಕಲ್ , ಸ್ಥಾಪಕ ಸಂಚಾಲಕರು, ಕೇಂದ್ರ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಮಾತೃ ಸಂಸ್ಥೆ ಕನ್ನಡ ಭವನ ಇವರು ತಿಳಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಅದೇ ದಿನ 101 ಮಂದಿಯಿಂದ ಭಜನೆ, ಮೆರವಣಿಗೆ, ಉದ್ಘಾಟನೆ, ಕವಿಗೋಷ್ಠಿ, ವಿಚಾರ ಗೋಷ್ಠಿ, ಪ್ರಶಸ್ತಿ ಪ್ರದಾನ, ಯಕ್ಷಗಾನ ಇವೇ ಮೊದಲಾದ ಕಾರ್ಯಕ್ರಮ ಜರಗಲಿದ್ದು ತಾಲ್ಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನ, ರಾಜ್ಯ ಸಮ್ಮೇಳನ, ಜೈಲ್ ಕೈದಿ ಗಳಿಗೆ 1 ತಿಂಗಳು ಹೆಚ್ಚು ದಿನ ಕನ್ನಡ ಕಲಿಕಾ ಕಾರ್ಯಕ್ರಮ, ಡೆಲ್ಲಿಯಲ್ಲಿ ಕವಿಗೋಷ್ಠಿ, ವಿವಿಧ ಜಿಲ್ಲೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಡೆನ್ಮಾರ್ಕ್ ದೇಶದವರೊಂದಿಗೆ ಹೆಚ್ಚಿನ ಶಿಕ್ಷಣ ಪಡೆದುದು, ಸುಮಾರು 12 ಕೃತಿ ರಚನೆ. ಸಾಕ್ಷರತೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ. ಇವೆಲ್ಲವನ್ನೂ ಗಮನಿಸಿ ಕವಿ ಕಾವ್ಯ ವಿಭೂಷಣ ಪ್ರಶಸ್ತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್




















