ತುಮಕೂರು/ ಕೊರಟಗೆರೆ ತಾಲೂಕು ಆಡಳಿತ ಕಚೇರಿಯಲ್ಲಿ ಮಡಿವಾಳಮಾಚಿದೇವ ಜಯಂತೋತ್ಸವದ ಕಾರ್ಯಕ್ರಮವನ್ನು ತಾಲೂಕು ಸಭಾಂಗಣದಲ್ಲಿ ಆಚರಿಸಲಾಯಿತು. ಮಡಿವಾಳ ಸಮಾಜದ ಮೂಲ ಪುರುಷ, ಕಲ್ಯಾಣ ನಾಡಿನ ಕ್ರಾಂತಿ ಪುರುಷ, ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ ಮಡಿವಾಳ ಮಾಚಯ್ಯನವರ ಜಯಂತಿಯ ದಿನ ಅವರನ್ನು ಸ್ಮರಿಸಿ ಪೂಜೆ ಸಲ್ಲಿಸಿದ ಉಪ ತಹಶೀಲ್ದಾರ್ ಮಾತನಾಡಿ ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಇಡೀ ಶರಣ ಸಮುದಾಯದ ಪ್ರಶಂಸೆಗೆ ಒಳಗಾದವರು. ಮಾಚಯ್ಯನದು ಬಹುಮುಖ ವ್ಯಕ್ತಿತ್ವ. ವೀರಶ್ರೀ, ಜ್ಞಾನಪ್ರಭೆ, ಸತ್ಯನಿಷ್ಠೆ, ನ್ಯಾಯನಿಷ್ಠುರತೆ, ಮಡಿವಾಳ ಮಾಚಿದೇವನ ಜೀವನ ಚರಿತ್ರೆ ಇಡೀ ಶರಣ ಸಮುದಾಯದಲ್ಲಿಯೇ ವೈಶಿಷ್ಠ್ಯತೆಯಿಂದ ಪಡೆದುಕೊಂಡಿದೆ. ಶರಣರನ್ನು, ಸಮಾಜದ ಜನರನ್ನು ತಿದ್ದುವ ಇವರ ಕಾರ್ಯ ಶ್ಲಾಘನೀಯ. ಅವರ ವಿಚಾರ ಶೀಲತೆ, ಭಕ್ತಿ, ಜ್ಞಾನ, ಅನುಭವ, ಪರಸ್ಪರ ಗೌರವ, ವೃತ್ತಿಗೌರವ, ಸಮಾನತೆ ಮುಂತಾದ ತತ್ವಗಳಿಗೆ ಅವರ ವಚನಗಳು ಮಹತ್ವ ನೀಡಿವೆ ಕೊರಟಗೆರೆ ಮಡಿವಾಳ ತಾಲೂಕು ಅಧ್ಯಕ್ಷರು ರುದ್ರೇಶ್ ಮಾತನಾಡಿ ಮಡಿವಾಳ ಜನಾಂಗದವರಿಗೆ ಒಂದು ದೋಬಿ ಘಾಟ್ ಬೇಕಾಗಿದ್ದು ಸರ್ಕಾರಕ್ಕೂ, ಗ್ರೇಡ್ 2 ತಹಶೀಲ್ದಾರ ಅವರಿಗೂ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2ತಹಶೀಲ್ದಾರ್ ರಾಮ್ ಪ್ರಸಾದ್, ರುದ್ರೇಶ್ ಬಸವರಾಜು, ರಘು, ಹಾಗೂ ಮಡಿವಾಳ ಜನಾಂಗದ ಹಲವು ಹಿರಿಯರು ಭಾಗವಹಿಸಿದರು.
ವರದಿ ಪ್ರಸನ್ನಕುಮಾರ್. ಎಸ್




















