ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ: ಆಲಿಕಲ್ಲು ಮಳೆಯಿಂದ 200 ಎಕರೆ ಭತ್ತದ ಬೆಳೆ ನಾಶ

ಸಿರುಗುಪ್ಪ – ದೇಶನೂರಿನ ವಿನಾಯಕ ನಗರ ಕ್ಯಾಂಪ್ ನಲ್ಲಿ ಸುತ್ತ ಮುತ್ತ ಆಲಿಕಲ್ಲು ಮಳೆ ಅಬ್ಬರಕ್ಕೆ ಸುಮಾರು 200 ಎಕರೆ ಭತ್ತದ ಬೆಳೆ ಕಬ್ಬು ಬಾಳೆ ತೆಂಗು ಮುಖ್ಯವಾಗಿ ಭತ್ತದ ಬೆಳೆ ನಾಶವಾಗಿದೆ ಗುಡಿಸಲು ತಗಡಿನ ಛಾವಣಿಗಳು ಗಾಳಿಗೆ ಹಾರಿ ಹೋಗಿವೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತ ದೇಶನೂರು ಗ್ರಾಮ ಪಂಚಾಯತ್ ನ ವಿನಾಯಕ ನಗರ ಕ್ಯಾಂಪ್ ನಲ್ಲಿ ಕಂಡ ಸೋಮವಾರ ,ಮಂಗಳವಾರ ಸುರಿದ ಧಾರಕಾರ ಮಳೆ ಬಿರುಗಾಳಿ ಗುಡುಗು ಸಿಡಿಲು ಮಿಂಚು ಆಲಿಕಲ್ಲು ಮಳೆಗೆ ಮಳೆಯ ಅಬ್ಬರಕ್ಕೆ ಬೆಳೆ ಹಾನಿಯಾಗಿದೆ. ಗ್ರಾಮ ಆಡಳಿತ ಅಧಿಕಾರಿ ಎಂ.ರಾಮಪ್ಪ ಕೃಷಿ ಅಧಿಕಾರಿ ಎ ಓ ಪುರುಷೋತ್ತಮ ಅವರು ಸರ್ವೆ ನಂಬರ್ 416 / ಎ12, 416 /1 ಬಿ1, 416 /1, 417/ಡಿ, 377/ಸಿ, 377/ಬಿ, 370 ಸಾಮಾಜಿಕ ಕಾರ್ಯಕರ್ತರು ಜನಾಭಿಪ್ರಾಯ ಮುಖಂಡರಾದ ಅಬ್ದುಲ್ ನಬಿ ರೈತರಾದ ದೇಶನೂರು ಯಂಕಣ್ಣ, ಹಚ್ಚೋಳಿ ಮಂಜುನಾಥ,ಹಚ್ಚೋಳ್ಳಿ ಯೋಗೇಶ, ಹಚ್ಚೋಳ್ಳಿ ಚಂದ್ರಪ್ಪ, ದೇವೇಂದ್ರ, ವೆಂಕಟರಮಣ, ವೀರೇಶ, ಸಿ ಹೆಚ್ ಗೋಪಾಲಕೃಷ್ಣ, ಬಾಬಯ್ಯ, ವೇಣುಗೋಪಾಲ, ಪಾಂಡುರಂಗ ಮತ್ತಿತರ ರೈತರು ಇದ್ದರು ಬೆಳೆ ಹಾನಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದರು. ಗ್ರಾಮ ಆಡಳಿತ ಅಧಿಕಾರಿ ಎಂ.ರಾಮಪ್ಪ, ಕೃಷಿ ಅಧಿಕಾರಿ ಎ ಓ ಪುರುಷೋತ್ತಮ ಅವರು ರೈತರ ಮನವಿ ಸ್ವೀಕರಿಸಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ ಭರವಸೆ ನೀಡಿದರು.

ವರದಿ : ಮಸೀದಿ. ಅಬ್ದುಲ್ ಗೌಸ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!