ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ದಿನಾಂಕ 24-03-2026 ರಂದು ಸಾರ್ವಜನಿಕರ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತ್ ಎದುರುಗಡೆ ಪ್ರತಿಭಟನೆ ಮಾಡಲಾಯಿತು. ಕುಡಿಯುವ ನೀರು ಸಾಕಷ್ಟು ಇದ್ದು ಆದರೆ ರಟಕಲ್ ಗ್ರಾಮ ಪಂಚಾಯತಿ ಅಧಿಕಾರಿಗಳು ಜನ ವಿರೋಧಿ ಧೋರಣೆ ಎದ್ದು ಕಾಣುತ್ತಿದೆ. ಬೇಸಿಗೆ ಕಾಲದಲ್ಲಿ ಕೊಡ ನೀರಿಗಾಗಿ ಜನರು ಪರದಾಡುವಂತಾಗಿದೆ. ಬೋರ್ ವೆಲ್ ದುರಸ್ತಿ ಮಾಡಲು ನಿರ್ಲಕ್ಷ್ಯ, ಪೈಪ್ ಲೈನ್ ದುರಸ್ತಿಯಲ್ಲಿ ಬೇಜವಾಬ್ದಾರಿ 3 ದಿನ ಆದರೂ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ನೀರಿನ ಬವಣೆ ಮಾತ್ರ ತಪ್ಪಿಲ್ಲ ಅನಾವಶ್ಯಕವಾಗಿ ದುರಸ್ತಿ ಹಣ ಮಾತ್ರ ಖರ್ಚು ಮಾಡುವುದು ತಪ್ಪುತ್ತಿಲ್ಲ, ಸಾರ್ವಜನಿರಿಗೆ ಸಮಸ್ಯೆ ಮಾತ್ರ ತಪ್ಪಿಲ್ಲ ಹೀಗಾಗಿ ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಒಡೆದ ಪೈಪು ದುರಸ್ತಿ ಮಾಡಲು ಆಗ್ರಹಿಸಿ, ಸಾರ್ವಜನಿಕ ರ ಹಿತದೃಷ್ಟಿಯಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದರು.
1) ರಟಕಲ್ ಬಸ್ ನಿಲ್ದಾಣ ಹತ್ತಿರ ಕೆಟ್ಟು ಹೋಗಿ ಬೋರ್ ವೆಲ್ ದುರಸ್ತಿ ಮಾಡಲಾರದೆ ಎರಡು ಮುರು ತಿಂಗಳಾದರೂ ದುರಸ್ತಿ ಮಾಡದೆ ಬರಿ ಕುಂಟು ನೆಪ ಹೇಳಿ ದಿನ ದಾಟಿಸಿದ್ದಾರೆ ಬೋರ್ ವೆಲ್ ದುರಸ್ತಿ ಮಾಡಬೇಕು.
2) ರಟಕಲ್ ವಿರಕ್ತ ಮಠದ ಎಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಇರುತ್ತದೆ ಮಾನ್ಯ ಸಚಿವರುಗಳು ಗಣ್ಯ ಮಾನ್ಯರು ಸ್ವಾಮೀಜಿಗಳು ಬರುತ್ತಾರೆ ಆದ ಕಾರಣ ಕಾಲುವೆ ಸ್ವಚ್ಚಗೊಳಿಸಿ ಪೈಪ್ ಲೈನ್ ಒಡೆದಿದ್ದು ದುರಸ್ತಿ ಮಾಡಿಸಿ ಸರಿಯಾಗಿ ದಿನಾಲೂ ಕುಡಿಯುವ ನೀರು ಬಿಡಬೇಕು ಪ್ರಮುಖ ಬೀದಿಗಳಲ್ಲಿ ದೀಪ ಹಾಕಿಸಬೇಕು ಎಂದು ಮನವಿ ಪತ್ರವನ್ನು ತಾಲೂಕ ಅಧಿಕಾರಿ ಬಸಣಪ್ಪ RI ಕಾಳಗಿರವರಿಗೆ ಕೊಡಲಾಯಿತು.
ಈ ಪ್ರತಿಭಟನೆಯಲ್ಲಿ ರೈತ ಸಂಘ ಜಿಲ್ಲಾಧ್ಯಕ್ಷರು ಶರಣಬಸಪ್ಪ ಮಮಶೆಟ್ಟಿ,ವೀರಣ್ಣ ಗಂಗಾಣಿ ಅಧ್ಯಕ್ಷರು ರೈತ ಸಂಘ ಕಾಳಗಿ, ರಟಕಲ್ ಗ್ರಾಮದ ರೈತ ಬಾಂಧವರು, ಹಿರಿಯರು , ಮಹಿಳೆಯರು ಮತ್ತು ಯುವಕರು ಭಾಗಿಯಾಗಿದ್ದರು.
ವರದಿ : ಚಂದ್ರಶೇಖರ ಆರ್. ಪಾಟೀಲ್




















