ಬೆಂಗಳೂರು: ಭಾರತೀಯ ಸಂವಿಧಾನದ ಚೌಕಟ್ಟಿನಡಿಯಲ್ಲಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆಯುತ್ತಿರುವ ಬಲಗೈ ಒಳ ಮೀಸಲಾತಿ ಹೋರಾಟಕ್ಕೆ ಕಲಬುರ್ಗಿ ಜಿಲ್ಲೆಯಿಂದ ಸಾವಿರಾರು ಹೋರಾಟಗಾರರು ಕೈಯಲ್ಲಿ ಬ್ಯಾನರ್ ಹಿಡಿದುಕೊಂಡು ಜಯಘೋಷ ಹಾಕುತ್ತಾ ಒಳಗಡೆ ಪ್ರವೇಶಿಸುತ್ತಿದ್ದಂತೆ ಹೋರಾಟದ ಕೂಗಿಗೆ ಧಾವಿಸಿ ಬಂದ ಪೋಲೀಸ್ ಸಿಬ್ಬಂದಿಗಳು ನಮ್ಮನ್ನು ತಡೆದಾಗ ನಾವುಗಳು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ನಮಗೆ ಕರೆದುಕೊಂಡು ಹೋಗಿ ಪೋಲೀಸ್ ಕಂಟೇನರಲ್ಲಿ ಕೂಡಿ ಹಾಕಿದಾಗ ನಮ್ಮನ್ನು ಬಿಡದೆ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಮಾದ್ಯಮದ ಮಿತ್ರರಿಗೆ ಹಾಗೂ ಹೋರಾಟದ ಮುಖಂಡತ್ವ ವಹಿಸಿದ ಪೂಜ್ಯ ಜ್ಞಾನಪ್ರಕಾಶ ಸ್ವಾಮಿಜಿಗಳಿಗೆ ಕರೆ ಮಾಡುತ್ತಿದ್ದಂತೆ ನಮಗೆ ಬಿಡುಗಡೆ ಮಾಡಿರುವ ಪೋಲೀಸ್ ನಡೆಗೆ ಕಲಬುರ್ಗಿ ಜಿಲ್ಲೆ ಹೋರಾಟಗಾರರು ಖಂಡನೆ ವ್ಯಕ್ತಪಡಿಸಿದ್ದಾರೆ.
ವರದಿ :ಚಂದ್ರಶೇಖರ್ ಆರ್. ಪಾಟೀಲ್




















