ಸಿರುಗುಪ್ಪ- ನಗರಸಭೆಯ ಪ್ರಕಟಣೆ ರಾಜ್ಯ ಮತ್ತು ದೇಶ ಆತ್ಮೀಯ ನಾಡ ಬಾಂಧವರೇ ಜನಗಣತಿ ನಮ್ಮ ರಾಜ್ಯ ಮತ್ತು ದೇಶದ ಭವಿಷ್ಯ ರೂಪಿಸುವ ಮಹತ್ವದ ಕಾರ್ಯ ಇದು ದತ್ತಾಂಶ ಆಧಾರಿತ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ ಆರೋಗ್ಯ ಶಿಕ್ಷಣ ವಸತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಂಪನ್ಮೂಲದ ಸಮರ್ಪಕ ಅಂಚಿಗೆಗೆ ದಾರಿ ತೋರಿಸುತ್ತದೆ ಜನಗಣತಿ 2027ರ ಅಂಗವಾಗಿ ನಾವು ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ. 2026 ಏಪ್ರಿಲ್ ಒಂದರಿಂದ 15ರವರೆಗೆ ಪ್ರತಿ ಕುಟುಂಬವು ತಮ್ಮ ಮಾಹಿತಿಯನ್ನು ಆನ್ಲೈನ್ https://secensus.gov.in ನಲ್ಲಿ ಭರ್ತಿ ಮಾಡಬಹುದು ಈ ಪ್ರಕ್ರಿಯೆ ಸರಳ ಮತ್ತು ಸುರಕ್ಷಿತವಾಗಿದೆ ಮೊಬೈಲ್ ಫೋನ್ ಸಂಖ್ಯೆ ಮತ್ತು ಓಟಿಪಿ ಮೂಲಕ ಸುಲಭವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಇದರಲ್ಲಿ ನಿಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯ ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಇಂದು ನೀವು ನೀಡುವ ನಿಖರ ಮಾಹಿತಿ ನಾಳೆಯ ಉತ್ತಮ ನೀತಿಗಳು ಸೇವೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಆಧಾರವಾಗುತ್ತದೆ 2026 ಏಪ್ರಿಲ್ ಹದಿನಾರು ರಿಂದ ಮೇ 15 ರವರೆಗೆ ಗಣತಿ ದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ ಈ ಗಣತಿಯಲ್ಲಿ ಯಾರೂ ಬಿಟ್ಟು ಹೋಗದಂತೆ ನಾವು ಖಚಿತಪಡಿಸುತ್ತೇವೆ ಆದ್ದರಿಂದ ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ ಜನಗಣತಿ 2027 ನಾವು ಎಲ್ಲರೂ ಕೈ ಜೋಡಿಸೋಣ ಧನ್ಯವಾದಗಳು. ಇದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ರಾಜ್ ವತಿಯಿಂದ ನಗರಸಭೆ ಪೌರಾಯುಕ್ತರು ಗಂಗಾಧರ ಮತ್ತು ಚಾರ್ಜ್ ಆಫೀಸರ್ ಜನಗಣತಿ 2027 ನಗರಸಭೆ ಸಿರುಗುಪ್ಪರವರಿಂದ ಪ್ರಕಟಿಸಲಾಗಿದೆ.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















