ಸಿರುಗುಪ್ಪ – ದೇಶದಲ್ಲಿ ನಾವೆಲ್ಲರೂ ಸಂವಿಧಾನ ಚೌಕಟ್ಟಿನೊಳಗೆ ಮತ್ತೊಬ್ಬರಿಗೆ ತೊಂದರೆಯಾಗದ ರೀತಿ ನಮ್ಮ ಮತ ಧರ್ಮ ಪಾಲಿಸಿದಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಕ್ರೈಸ್ತ ಧರ್ಮ ಗುರು ಐವಾನ್ ಪಿಂಟೋ ಹೇಳಿದರು. ಬಳ್ಳಾರಿ ನಗರದ ಮಹಾತ್ಮ ಗಾಂಧಿ ಭವನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಬಳ್ಳಾರಿ ಜಿಲ್ಲಾ ಘಟಕದಿಂದ ಆಯೋಜಿಸಿದ ಈದ್ ಮಿಲನ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಸೋಮ ಸಮುದ್ರ ಕೊಟ್ಟೂರು ಸ್ವಾಮಿ ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಮಾತನಾಡಿ ಪರಸ್ಪರರು ಧರ್ಮದ ತಿರುಳನ್ನು ಅರಿತು ಬಾಳಬೇಕು ಸಂಘರ್ಷ ಸೃಷ್ಟಿಯಾಗದು ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಖಂಡ ಜಿಲ್ಲಾ ಅಧ್ಯಕ್ಷರಾದ ಡಾ ನಿಷ್ಠಿ ರುದ್ರಪ್ಪ ಅವರು ಮಾತನಾಡಿ ಜಗತ್ತಿನ ಎಲ್ಲಾ ಧರ್ಮಗಳು ಭೋಧಿಸಿರುವುದು ಮಾನವ ಜನಾಂಗದ ಉದ್ಧಾರವನ್ನೇ ನಾವು ಶ್ರೇಷ್ಠತೆಯ ಭ್ರಮೆ ಬಿಟ್ಟು ಎಲ್ಲರೊಳಗೆ ಒಂದಾಗಿ ಬಾಳಿದಾಗ ಮಾತ್ರ ಶಾಂತಿ ಸೌಹಾರ್ದತೆಯ ಸಮಾಜ ನಿರ್ಮಾಣ ಸಾಧ್ಯ ಎಂದರು ಗುಲ್ ಫಾಮ್ ಅಲಿ ಅವರು ಪವಿತ್ರ ಖುರಾನ್ ಮಜೀದ್ ಖಿರಾತ ಪಠಣ ಮಾಡಿದರು. ಸೈಯದ್ ನಾಸಿರ್ ಅಲಿ ಪ್ರಸ್ತಾವಿಕ ಮಾತನಾಡಿದರು ಸೈಯದ್ ಮಿಸ್ಸಾಜುದ್ದೀನ್ ಖಾದ್ರಿ ಅವರು ಪವಿತ್ರವಾದ ಮಾಹೆ ರಂಜಾನ್ ತಿಂಗಳ ಮಹತ್ವವನ್ನು ತಿಳಿಸಿಕೊಟ್ಟರು. ಜಮಾತೆ ಇಸ್ಲಾಮಿ ಹಿಂದ್ ಮುಖ್ಯಸ್ಥರಾದ ಡಾ ಜೈನುಲ್ ಅಬಿದೀನ್ ಖಾದ್ರಿ ನಿಜಾಮುದ್ದೀನ್ ಸಮಾಜ ಸುಧಾರಕ ಅಲ್ ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಮತ್ತಿತರರು ಇದ್ದರು ಸಿರಾಜ್ ಅಹಮದ್ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















