ಜಯಗುರು ಬಸವ ಜಯಗುರು ಬಸವ
ಎಂದು ನಾನು ನಿತ್ಯ ನೆನೆಯುವೆ
ಮನವ ಶುದ್ಧ ಮಾಡಿ ಬೆಳಗು ಹೊತ್ತಲ್ಲಿ ಎದ್ದು ನಾನು ಕೈಯ ಮುಗಿದು ತಲೆಯ ಬಾಗಿ ಬಸವ ಎಂದು ನುಡಿಯುವೆ …..
ಬಸವಣ್ಣನೇ ಬಂಧು ಬಸವಣ್ಣನೇ ಬಳಗ
ಎಂದು ನಾನು ಅರಿಯಲು
ಅಂತರಂಗದಿ ಸ್ಮರಿಸಿಕೊಂಡು
ಬಸವ ನಿನ್ನ ಪಾದ ಪೂಜೆ ಮಾಡಲು
ಅರಿಷಡ್ವರ್ಗಗಳು ದೂರವಾಗಿ
ಭಾವ ಶುದ್ಧಿಯಾಯಿತು. ….
ನಿತ್ಯ ನಿನ್ನ ಜಪಿಸಲು
ನನ್ನ ಮೇಲೆ ನಿನ್ನ ಕರುಣೆ ತೋರಲು
ಹಸನು ಮನದಿ ನೆನೆಯಲು
ಸ್ವಾರ್ಥ ಭಾವ ಇಲ್ಲವಾಗಿ
ಬಸವ ಭಾವ ಮೂಡಲು
ಎಲ್ಲಿ ನೋಡಿದಲ್ಲಿ ನಿನ್ನ ವಚನವು ಕೇಳಲು….
ಬಸವಣ್ಣನ ವಚನಗಳು
ನಮ್ಮ ಬದುಕಿನ ಆಸ್ತಿಯು
ಅಜರಾಮರವಾಗಿ ಉಳಿಯಲಿ
ಗುರು ಬಸವಣ್ಣನ ಶಕ್ತಿಯು
ನಮ್ಮನು ಕಾಯಲಿ ಎಂದು ಬೇಡಲು
ಅವನ ಮೇಲಿಡಲು ನಮ್ಮ ಭಕ್ತಿಯು….
ಎಲ್ಲೆಡೆ ನಡೆಯಲಿ ಬಸವಣ್ಣನ ಸ್ಮರಣೆಯು
ಎಲ್ಲೆಡೆ ಮೊಳಗಲಿ ಬಸವಣ್ಣನ ಕೀರ್ತಿಯು
ಹುಟ್ಟು ಸಾವು ಜಗದ ನಿಯಮ ಅರಿಯಲು
ಲೌಕಿಕ ಬದುಕಲ್ಲಿ ನನ್ನ ನಾನು ಮರೆತೆನು
ನಾನು ನನ್ನದೆಂಬ ಸ್ವಾರ್ಥ ಬುದ್ಧಿಯಲಿ
ಬಸವಣ್ಣನ ನೆನಹು ಮರೆತು ಹೋದೆನು …..
- ಅರುಣಕುಮಾರ ರಾಜಮಾನೆ.
ಚಿನ್ಮಯ ನಿವಾಸ ಶಂಕರ ನಗರ ಅಥಣಿ.
591304
ತಾ. ಅಥಣಿ.
ಜಿ. ಬೆಳಗಾವಿ.
ಮೊ.ನಂ. 7259229697




















