ಸಿರುಗುಪ್ಪ – ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳ ಮಾಲೀಕರು ಘನ ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯನುಸಾರ 2026 – 27 ನೇ ಸಾಲಿನ 1 ಏಪ್ರಿಲ್ 2026 ರಿಂದ 30 ಏಪ್ರಿಲ್ 2026 ರ ವರೆಗೆ ಆಸ್ತಿ ತೆರಿಗೆಯ ಮೇಲೆ ಶೇಕಡ 5 ರಷ್ಟು ತೆರಿಗೆ ವಿನಾಯತಿ ಹಾಗೂ 1 ಮೇ 2026 ರಿಂದ 30 ಜೂನ್ 2026 ರವರೆಗೆ ಯಾವುದೇ ದಂಡವಿಲ್ಲದೆ ತೆರಿಗೆ ಪಾವತಿಸಲು ಮತ್ತು 1 ಜುಲೈ 2026ರ ನಂತರ ಆಸ್ತಿ ತೆರಿಗೆ ಜೊತೆಗೆ ಪ್ರತಿ ಮಾಹೆ ಶೇಕಡಾ 2 ರಷ್ಟು ದಂಡ ಸಹಿತ ತೆರಿಗೆ ಪಾವತಿಸಬೇಕಾಗಿರುತ್ತದೆ ಆದ್ದರಿಂದ ಎಲ್ಲಾ ಆಸ್ತಿಗಳ ಆಸ್ತಿ ಮಾಲೀಕರು 2026- 27ನೇ ಸಾಲಿನ ಆಸ್ತಿ ತೆರಿಗೆಯನ್ನು 1 ಏಪ್ರಿಲ್ 2026 ರಿಂದ 30 ಏಪ್ರಿಲ್ 2026ರ ವರೆಗೆ ಇರುವ ಶೇಕಡಾ 5 ರಷ್ಟು ತೆರಿಗೆ ವಿನಾಯತಿಯನ್ನು ಸದುಪಯೋಗ ಪಡೆದುಕೊಂಡು ಏಪ್ರಿಲ್ 2026 ರ ಮಾಹೆಯಲ್ಲಿ ಸ್ವಯಂ ಘೋಷಿತ ತೆರಿಗೆ ಪದ್ಧತಿಯಡಿ ತೆರಿಗೆಯನ್ನು ಪಾವತಿಸಬೇಕು ಎಂದು ನಗರಸಭೆ ಪೌರಾಯುಕ್ತರದ ಗಂಗಾಧರ ಸುಲ್ತಾನ್ ಪುರ್ ಅವರು ತಿಳಿಸಿದರು.
ವರದಿ : ಮಸೀದಿ.ಅಬ್ದುಲ್ ಗೌಸ್. ಸಿರುಗುಪ್ಪ




















