ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶೇ.94ರಷ್ಟು ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ ಮದರ್ ತೆರೇಸಾ ಪಿ‌. ಯು. ಕಾಲೇಜು

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿರುವ ಪ್ರತಿಷ್ಠಿತ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು (ಪಿ. ಯು) ಪ್ರತಿ ವರ್ಷದಂತೆ ಈ ಬಾರಿಯೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಯಶಸ್ಸಿನ ಪಥದಲ್ಲಿ ಮುಂದುವರಿದಿದೆ.
ರಾಜ್ಯದಲ್ಲಿ ಪಿ. ಯು ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ಪಿಯು ಕಾಲೇಜು 2025-26ನೇ ಸಾಲಿನ ಫಲಿತಾಂಶದಲ್ಲಿ ಶೇ.94 ರಷ್ಟು ಫಲಿತಾಂಶ ಪಡೆದಿದೆ. ಒಟ್ಟು 96 ವಿದ್ಯಾರ್ಥಿಗಳಲ್ಲಿ 90 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ 17 ಡಿಸ್ಟಿಂಕ್ಷನ್, 63 ಪ್ರಥಮ, 11 ದ್ವಿತೀಯ ಸ್ಥಾನದ ಸಾಧನೆ ಮಾಡಿದೆ.
ನಂತರ ಪ್ರಾಚಾರ್ಯ ಮಹಾಬಲೇಶ್ವರಪ್ಪ ಮಾತನಾಡಿ, ಇಡೀ ರಾಜ್ಯದಲ್ಲಿ ಪಿಯು ಫಲಿತಾಂಶ ಪ್ರಕಟವಾಗಿದೆ. ಈ ಫಲಿತಾಂಶದಲ್ಲಿ 96 ವಿದ್ಯಾರ್ಥಿಗಳ ಪೈಕಿ 90 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.94 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಶೇ.100ಕ್ಕೆ 100ರಷ್ಟು ಫಲಿತಾಂಶ ಬಂದಿದ್ದು, ಇದರಿಂದ ಸಂಸ್ಥೆ ಮತ್ತು ಕಾಲೇಜಿನ ಕೀರ್ತಿ ಹೆಚ್ಚಿಸಿದೆ. ಇದರಲ್ಲಿ 10 ಡಿಸ್ಟಿಂಕ್ಷನ್, 20 ಪ್ರಥಮ, 11 ದ್ವಿತೀಯ ಬಂದಿದೆ. ಮತ್ತು ಈ ಫಲಿತಾಂಶದಲ್ಲಿ ಚೈತನ್ಯ 577(ಶೇ.96.16) ಅಂಕದೊಂದಿಗೆ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಭೂಮಿಕಾ 575(ಶೇ.95.83),
ಮೇಘನಾ 569(ಶೇ.94.83),
ಬಿ.ಬಾನುಪ್ರಿಯಾ 566(ಶೇ.94.33),
ಶೃತಿ 560(ಶೇ.93.33),
ಎಂ.ಕಾವೇರಿ 549(ಶೇ.91.50) ಅಂಕಗಳೊಂದಿಗೆ ಸಾಧನೆಗೈದಿದ್ದಾರೆ. ಮತ್ತು ಕಲಾ ವಿಭಾಗದಲ್ಲಿ 56 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಉತ್ತೀರ್ಣರಾಗುವದೊಂದಿಗೆ ಶೇ.94.79ರಷ್ಟು ಫಲಿತಾಂಶ ಗಳಿಸಿದೆ. ಇದರಲ್ಲಿ 7 ಡಿಸ್ಟಿಂಕ್ಷನ್, 43 ಪ್ರಥಮ ಬಂದಿವೆ. ಪಿ.ಶಾಶಾಬೀ 554(ಶೇ.92.33), ಜ್ಯೋತಿ 552(ಶೇ.92), ಹೆಚ್.ವಾತ್ಸಲ್ಯ 533(ಶೇ.88.83), ಕೆ.ರೇಖಾ 518(ಶೇ.86.33), ಸುಷ್ಮಿತಾ 514(ಶೇ.85.66), ರೇಷ್ಮಾ 513(ಶೇ.85.50) ಅಂಕದ ಮೂಲಕ ಶಾಲೆಯ ಹೆಗ್ಗಳಿಗೆ ಪಾತ್ರರಾಗಿದ್ದಾರೆ ಎಂದರು.
ವಿದ್ಯಾರ್ಥಿಗಳ ಸಾಧನೆಗೆ ವಿವಿಎಸ್‌ಎಸ್ ಟ್ರಸ್ಟ್ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ, ಕಾರ್ಯದರ್ಶಿ ಪ್ರಕಾಶ ಜಿ.ನಾಯಕ, ಪ್ರಾಂಶುಪಾಲ ಬಿ.ಮದ್ದಾನೆಪ್ಪ, ಟ್ರಸ್ಟ್ ಪದಾಧಿಕಾರಿಗಳು, ಉಪನ್ಯಾಸಕರು, ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!