ಚಿತ್ತಾಪುರ : ದಿವ್ಯ ವೇದಿಕೆಯ ಮೇಲೆ ಸದ್ಗುರು ಶ್ರೀ ಭೋಜಲಿಂಗೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮಠಾಧೀಶರು. ಇದೇ ಸಂಧರ್ಭದಲ್ಲಿ ಆಂಧೋಲಾ ಪೂಜ್ಯರು ಭಾರತ ಪವಿತ್ರ ಶರಣರು ಹಾಗೂ ಸೂಫಿ-ಸಂತರ ನಾಡಾಗಿದ್ದು, ಇಲ್ಲಿ ಭಕ್ತಿ ಮತ್ತು ಧಾರ್ಮಿಕ ಚಟುವಟಿಕೆಗಳು ಜನರಲ್ಲಿ ಶಾಂತಿ, ಸಾಮರಸ್ಯ ಮತ್ತು ನೆಮ್ಮದಿಯನ್ನು ಬೆಳೆಸುತ್ತವೆ ಎಂದು ಆಂಧೋಲಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಸೂಗೂರ ಎನ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ ಸ್ವಯಂ ಸಿದ್ದ ಶರಣ ಪವಾಡ ಪುರುಷ ಶ್ರೀ ಭೋಜಲಿಂಗೇಶ್ವರ ದೇವಸ್ಥಾನದ ನವಶಿಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದ ನಂತರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳ ಮಹತ್ವ
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಒಗ್ಗಟ್ಟು ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುತ್ತವೆ. ಇವು ಸಮಾಜದಲ್ಲಿ ಬದಲಾವಣೆಗೆ ಪ್ರೇರಣೆ ನೀಡುತ್ತವೆ ಎಂದು ಅವರು ತಿಳಿಸಿದರು.
ಮಠದ ಸೇವೆ ಶ್ಲಾಘನೀಯ
ಶ್ರೀ ಭೋಜಲಿಂಗೇಶ್ವರ ಮಠದೊಂದಿಗೆ ದೀರ್ಘಕಾಲದ ಸಂಬಂಧವಿರುವುದಾಗಿ ತಿಳಿಸಿದ ಅವರು, ಹಿರಗಪ್ಪ ತಾತನವರು ತ್ರಿವಿಧ ದಾಸೋಹಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಕಾರ್ಯ ಶ್ಲಾಘನೀಯ ಎಂದರು.
ಕೃಷಿ ಮತ್ತು ಯುವಕರಿಗೆ ಸಂದೇಶ
ಮಠಾಧೀಶರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯುವಕರಿಗೆ ಪ್ರೇರಣೆಯಾಗಬೇಕು ಎಂದು ಹೇಳಿ, ಭವಿಷ್ಯದಲ್ಲಿ ಈ ಮಠ ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ಬೆಳೆಯಲಿ ಎಂದು ಆಶಿಸಿದರು. ಸ್ವಾಮೀಜಿಗಳ ಸಂದೇಶ
ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮಾತನಾಡಿ, ಭೋಜಲಿಂಗೇಶ್ವರರು ಆಧ್ಯಾತ್ಮಿಕ ಸಾಧನೆಯ ಮೂಲಕ ಸಿದ್ಧಿಪುರುಷರಾಗಿ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ನೀಡಿದ್ದಾರೆ ಎಂದು ಹೇಳಿದರು.
ದೇವಸ್ಥಾನದ ಆಧ್ಯಾತ್ಮಿಕ ಶಕ್ತಿ
ದೇವಾಲಯಗಳ ಗರ್ಭಗುಡಿ ಮತ್ತು ಕಳಸದಲ್ಲಿ ಸಕಾರಾತ್ಮಕ ಶಕ್ತಿ ಇರುವುದಾಗಿ ತಿಳಿಸಿ, ಭಕ್ತರು ದರ್ಶನ ಪಡೆದು ಪುಣ್ಯ ಗಳಿಸಬೇಕು ಆಂಧೋಲಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕರುಣೇಶ್ವರ ಮಠದ ಪೂಜ್ಯರು ಕರೆ ನೀಡಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಶ್ರೀ ಮಠದ ಪೀಠಾಧಿಪತಿ ಹಿರಗಪ್ಪ ತಾತನವರ ದಿವ್ಯ ನೇತೃತ್ವದಲ್ಲಿ ಜರುಗಿತು. ಇದೇ ಸುಸಂಧರ್ಭದಲ್ಲಿ – ಶ್ರೀ ಅಪ್ಪಾರಾವ ದೇವಿ ಮುತ್ಯಾ ಶ್ರೀನಿವಾಸ ಸರಡಗಿ ಪೂಜ್ಯರು, ಶ್ರೀ ಡಾ.ಅಭಿನವ ಷ.ಬ್ರ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಹಿರೇಮಠ ಮಹಾಸ್ವಾಮಿಗಳು ಮುಗಳನಾಗಾಂವ ಮತ್ತು ಜೇಮಸಿಂಗ ಮಹಾರಾಜರು ಯಲ್ಲಾಲಿಂಗೇಶ್ವರ ಪುಣ್ಯಾಶ್ರಮ ಮುಗಳನಾಗಾಂವ, ಸಂಗಮೇಶ್ವರ ಮಹಾಸ್ವಾಮಿಗಳು ಯರಗೋಳ ಮತ್ತು ಹಲ್ಕರ್ಟಿ ಪೂಜ್ಯರು ಸೇರಿದಂತೆ ವಿವಿಧ ಮಠಾಧೀಶರು, ಸ್ವಾಮೀಜಿಗಳು ಹಾಗೂ ಸಾವಿರಾರು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವಾರಿ.ಮತ್ತು ಶ್ರೀ ಶರಣಗೌಡ ಬೆನಕನಹಳ್ಳಿ. ಭೀಮರೆಡ್ಡಿ ಗೌಡ ಕುರಾಳ.ಮತ್ತು ವಿಶ್ವನಾಥ ರೆಡ್ಡಿ ಪಾಟೀಲ. ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ. ಮಹಿಪಾಲ್ ರೆಡ್ಡಿ ಗೌಡ ಕರಣಗಿ,ಶರಣಗೌಡ ವಕೀಲರು. ರಾಮರೆಡ್ಡಿಗೌಡ ಕೊಳ್ಳಿ.ಈರಣ್ಣ ಬಲಕಲ್. ಮಲ್ಲಯ್ಯ ಕಸಬಿ.ಶಂಕರಗೌಡ ಮಾಸ್ತರ ಯಾದಗಿರ. ಎಸ್ ಎಸ್ ಜ್ಯುಗೇರಿ ಸರ.ಪ್ರಭು ಹೂಗಾರ. ಸಂತೋಷ ಪೂಜಾರಿ, ಬಾಬು ಪಾಟೀಲ. ಪ್ರವೀಣ್ ಪಾಟೀಲ ತುಮಕೂರು.ಸಿದ್ದು ಗೌಡ ಕುರಾಳ.ಸಿದ್ದು ಸಾಹು ಕುಂಭಾರ. ಮಲ್ಲಿನಾಥ ಚಿನ್ನಾಪೋಟೊ ಸ್ಟುಡಿಯೋ. ನರೇಂದ್ರ ಗುತ್ತಿ ಯಾದಗಿರ. ಭೋಜು ಚಿಗರಳ್ಳಿ. ಸೇರಿದಂತೆ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಉಪಸ್ಥಿತರಿದ್ದರು. ನಿರೂಪಣೆ ಅಂಬ್ರೇಶ ಜಾಲಿಬೆಂಚಿ ಮಾಡಿದರು.
- ಕರುನಾಡ ಕಂದ ಪತ್ರಿಕೆ




















