ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಂಬೇಡ್ಕರ್ ಜಯಂತಿಯನ್ನು ವಿಶೇಷ ರೀತಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದ ಗುಂಡಿನಪಾಳ್ಯ ಕರ್ನಾಟಕ ಬಹುಜನ ಸಂಘರ್ಷ ಸಮಿತಿ.

ಕೊರಟಗೆರೆ ತಾಲ್ಲೂಕಿನ ಗುಂಡಿನ ಪಾಳ್ಯ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ವಿಶೇಷವಾಗಿ ಹಸಿರು ಕ್ರಾಂತಿಯ ಹರಿಕಾರ ಉಪ ಪ್ರಧಾನಿ ಡಾಕ್ಟರ್ ಬಾಬು ಜಗಜೀವನ್ ರಾಮ್ ಜಯಂತಿಯನ್ನು ಒಟ್ಟಿಗೆ ಅದ್ದೂರಿಯಾಗಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ಗ್ರಾಮದ ಎಲ್ಲಾ ಯುವಕರು ದಲಿತ ಮುಖಂಡರು ಸಂಘಟನಾ ಸದಸ್ಯರುಗಳು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡುವುದರ ಮುಖಾಂತರ ನಮಸ್ಕರಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷರಾದ ಗೋಪಿನಾಥ್ ರವರು ಅಂಬೇಡ್ಕರ್ರವರು ಸಂವಿಧಾನ ರಚನೆ ಮಾಡದಿದ್ದರೆ ಹಿಂದುಗಳು ದಲಿತರು ಇಂದಿನವರೆಗೂ ಜೀತದಾಳುಗಳಾಗಿಯೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸಬೇಕಾಗುತ್ತದೆ ಆದ್ದರಿಂದ ದಲಿತರು ಶಿಕ್ಷಣಕ್ಕೆ ಒತ್ತು ನೀಡಿ ದಲಿತ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉನ್ನತ ಅಧಿಕಾರದಲ್ಲಿ ಇದ್ದರೆ ನಮಗೆ ನಮ್ಮ ಸಮಾಜವು ಉತ್ತಮ ಗೌರವ ನೀಡುತ್ತದೆ ಅದಕ್ಕಾಗಿ ನಾವುಗಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಮಹಿಳೆರಿಗೂ ಸಮಾನ ಹಕ್ಕು ಸಿಗಬೇಕು ಎಂದು ಕಾರ್ಯಕ್ರಮದಲ್ಲಿ ಬಂದಿದ್ದ ಯುವಕರು ಮಹಿಳೆಯರು ಎಲ್ಲರಿಗೂ ಶಿಕ್ಷಣದ ಮಹತ್ವ ವಿದ್ಯಾವಂತರ ಶಕ್ತಿಯನ್ನು ತಿಳಿಸಿದರು. ಕೊರಟಗೆರೆಯ ದಲಿತರ ಮುಖಂಡರಾದ ದಾಡಿ ವೆಂಕಟೇಶ್ ರವರು ಮಾತನಾಡಿ ಅಂಬೇಡ್ಕರ್ ಅವರಿಗೆ 135 ನೇ ಜಯಂತಿಯ ಶುಭಾಶಯಗಳು ಹಾಗೂ ಬಾಬು ಜಗಜೀವನ್ ರಾಮ್ 119ನೇ ಜಯಂತಿಯ ಶುಭಾಶಯಗಳು ತಿಳಿಸಿ.
ಅಂಬೇಡ್ಕರ್ ಜಯಂತಿಯನ್ನು ನಾವು ಶ್ರದ್ಧೆ ಭಕ್ತಿಯಿಂದ ಆಚರಿಸಬೇಕು ಹಾಗೂ ಅಂಬೇಡ್ಕರ್ ತಿಳಿಸಿದ ಮಾರ್ಗದಲ್ಲಿ ನಾವುಗಳು ಬೆಳೆಯಬೇಕು ಸಮಾಜದಲ್ಲಿ ದಲಿತರು ಧೈರ್ಯದಿಂದ ಹೋರಾಟ ಮಾಡುವುದನ್ನು ಕಲಿಯಬೇಕು ಇದಕ್ಕೆ ಶಿಕ್ಷಣವಂತರಾಗಬೇಕು ಮೊದಲು ನಾವು ತದನಂತರ ಜಾತಿ ತಾರತಮ್ಯವನ್ನು ಅಸ್ಪೃಶ್ಯತೆಯನ್ನು ತೊರೆದು ನಾವೆಲ್ಲರೂ ಒಗ್ಗಟ್ಟಿನಿಂದ ಸಮಾನತೆ ಭಾವೈಕ್ಯತೆಗಳ ಬಗ್ಗೆ ತಿಳಿದುಕೊಂಡು ಜಾತಿ ವ್ಯವಸ್ಥೆಯ ವಿರುದ್ಧದ ತೀವ್ರವಾದ ಕ್ರಾಂತಿಕಾರಿ ಬದಲಾವಣೆಗಳನ್ನು ಕಲಿಯಬೇಕು. ಸಾಮಾಜಿಕ ಮತ್ತು ಸಮಾನತೆ ನ್ಯಾಯದ ಪರ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಯುವಕರಿಗೆ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ನರಸಿಂಹರಾಜು ಎಲ್ ರವರು ಮಾತನಾಡಿ ಅಂಬೇಡ್ಕರ್ ರವರು ಅವರು ಭಾರತೀಯ ಸಂವಿಧಾನದ ಶಿಲ್ಪಿ, ಮಹಾನ್ ಕಾನೂನು ತಜ್ಞ, ಸಮಾಜ ಸುಧಾರಕ ಮತ್ತು ಚಿಂತಕನಾಗಿದ್ದರು।
ಅವರು ಸಮಾನತೆ, ನ್ಯಾಯ, ಶಿಕ್ಷಣ ಮತ್ತು ಮಾನವ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದರು ನಾವು ಅವರ ಮಾರ್ಗದರ್ಶನದಲ್ಲಿ ಅವರು ಹೇಳಿದ ತತ್ವಗಳನ್ನು ಪಾಲಿಸಿದರೆ ಜೀವನದಲ್ಲಿ ಉತ್ತಮ ನಾಗರಿಕರಾಗುತ್ತೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ಅಧ್ಯಕ್ಷರಾದ ಏರ್ಟೆಲ್ ಗೋಪಿಯವರು, ಡಿಎಸ್ಎಸ್ ಮುಖಂಡರಾದ ದಾಡಿ ವೆಂಕಟೇಶ್, ಕರವೇ ತಾಲೂಕು ಅಧ್ಯಕ್ಷರಾದ ನರಸಿಂಹರಾಜು ಎಲ್, ಗೌಡ್ರು ದೊಡ್ಡಯ್ಯ,ಹರ್ಷ, ಇನ್ನು ಅನೇಕ ದಲಿತ ಮುಖಂಡರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅದ್ದೂರಿಯಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದರು.

ವರದಿ ಪ್ರಸನ್ನಕುಮಾರ್ ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!