ಕೊಪ್ಪಳ/ ಕನಕಗಿರಿ : ತಾಲೂಕಿನ ಹುಲಿಹೈದರ ಗ್ರಾಮದ ಹಿರೇದೇವತೆಯ 24ನೇ ಜಾತ್ರಾ ಮಹೋತ್ಸವದ ನಿಮಿತ್ತ ಏ.17ರಂದು ಉಚಿತ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಹುಲಿಹೈದರ ಸಂಸ್ಥಾನ ವಾಲ್ಮೀಕಿ ಸಮಾಜದ ಮೂಲ ಧರ್ಮ ಗುರುಗಳಾದ ದಿ. ರಾಜಾ ರಂಗಪ್ಪ ನಾಯಕ ಇವರ ಸ್ಮರಣಾರ್ಥವಾಗಿ ಆಯುಷ್ ಇಲಾಖೆ, ಶ್ರೀ ಮಹರ್ಷಿ ವಾಲ್ಮೀಕಿ ಆರ್. ಸಿ. ನಾಯಕ ಜನಸೇವೆ ಟ್ರಸ್ಟ್ ಸಹಯೋಗದಲ್ಲಿ ಅರಮನೆ ಆವರಣದಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಅರೋಗ್ಯ ತಪಾಸಣೆ ಹಾಗೂ ಆಯುರ್ವೇದ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಶಿಬಿರದ ಉಪಯೋಗ ಪಡೆದುಕೊಳ್ಳುವಂತೆ ಟ್ರಸ್ಟ್ ಅಧ್ಯಕ್ಷ ಶ್ರೀ ರಾಜಾ ಚನ್ನಪ್ಪ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಹನುಮಂತಪ್ಪ ನಾಯಕ




















