
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಗೆ ಸೇರಿದ ಗದಡ್ಡ ಬೋರನಹಟ್ಟಿ ಎಸ್ ಸಿ ಕಾಲೋನಿಗೆ ಸೇರಿದ ದಲಿತ ಕೇರಿಯ ಜನರು ಸೊಳ್ಳೆ ಮತ್ತು ಚರಂಡಿಯ ವಾಸನೆಯೊಂದಿಗೆ ಜೀವನ ಸಾಗಿಸುತ್ತಿದ್ದು ಕಾಲೋನಿಯಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಹ ಯಾವ ಅಧಿಕಾರಿಗಳು ಇದರ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾಗಲಿ ಕಾಲೋನಿಗೆ ಭೇಟಿ ನೀಡಿಲ್ಲ ಹಾಗಾಗಿ ವಯಸ್ಸಾದವರು ವೃದ್ಧರು ಸೊಳ್ಳೆ ಇತರ ವಾಸನೆಯಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ ಹಾಗಾಗಿ ಈ ಬಗ್ಗೆ ಸಂಬಂಧಿಸಿದ ಇಲಾಖೆ ಗಮನ ಹರಿಸಿ ಎಂದು ಬಡೆಲಡಕು ದುರುಗೇಶ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರು ಕೂಡ್ಲಿಗಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















