
ಕೊಪ್ಪಳ : ನಮ್ಮ ದೇಹದಲ್ಲಿ ಬಲವಾದ ಮತ್ತು ಶಕ್ತಿಶಾಲಿಯಾದ ಮೂಳೆ ಹಲ್ಲು. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಹಿರೇ ಸಿಂದೋಗಿಯ ಸರಕಾರಿ ಸಮುದಾಯ ಅರೋಗ್ಯ ಕೇಂದ್ರದ ದಂತ ವೈದ್ಯ ಡಾ. ಸವಿತ ಅವರು ಹೇಳಿದರು.
ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್. ಎಸ್ ) -2025-26 ಸಾಲಿನ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ
ಕಾರ್ಯಕ್ರಮದಲ್ಲಿ ಬಾಯಿ ಅರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಆರೋಗ್ಯಕರ ಬಾಯಿ ಇದ್ದರೆ ಅರೋಗ್ಯಕರ ದೇಹ ಇರುತ್ತದೆ, ಹಲ್ಲುಗಳು ಗಟ್ಟಿಯಾಗಿ ಇದ್ದರೆ ನಮ್ಮ ಅರೋಗ್ಯವಂತರಾಗಿದ್ದೇವೆ ಎಂದರ್ಥ. ಬಾಯಿ ಮತ್ತು ನಾಲುಗೆ ಅರೋಗ್ಯ ಕುರಿತು ಜಾಗೃತಿ ಇರಬೇಕು. ಎಲ್ಲರೂ ಬೆಳಿಗ್ಗೆ ಮತ್ತು ರಾತ್ರಿ ಎರಡು ಬಾರಿ ಹಲ್ಲು ಉಜ್ಜಬೇಕು. ಹಲ್ಲುಗಳ ಕುರಿತು ನಿರ್ಲಕ್ಷ್ಯ ಮಾಡಬಾರದು.
ಎಲ್ಲರೂ ಪ್ರತಿ ದಿನ ಮೂರು -ನಾಲ್ಕು ಲೀಟರ್ ನೀರು ಕುಡಿಯಿರಿ. ಚಾಕಲೆಟ್ಸ್ ತಿನ್ನಬಾರದು. ಚಹಾ, ಕಾಫಿ ಕಡಿಮೆ ಸೇವಿಸಿ. ತರಕಾರಿ ಮತ್ತು ಹಣ್ಣುಗಳು ಜಾಸ್ತಿ ಸೇವಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗೊಂಡಬಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಲಕ್ಷ್ಮಿ ಅವರು ಮಾತನಾಡುತ್ತ ನಾವು ನಮ್ಮ ಪಂಚಾಯತ್ ವತಿಯಿಂದ ಸ್ವಚ್ಛತೆ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಗ್ರಾಮಗಳನ್ನು ನಾವು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಗೊಡ್ಲಯ್ಯ ಅವರು ಮಾತನಾಡುತ್ತ ಇಂದು ಅರೋಗ್ಯ ಚೆನ್ನಾಗಿ ಇದ್ದವರೇ ಶ್ರೀ ಮಂತರು. ಇಂದು ಪರಿಸರ ಮಾಲಿನ್ಯವಾಗಿದೆ. ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವುದೇ ನಾವು ಹೆಚ್ಚು ಶ್ರಮ ಪಡೆಯುತ್ತಿದ್ದೇವೆ.
ಅಧ್ಯಕ್ಷತೆಯನ್ನು ವಹಿಸಿದ ಉಪನ್ಯಾಸಕರಾದ ಶ್ರೀ ಕಾಂತ್ ಸಿಂಗಾಪುರ್ ಅವರು ಮಾತನಾಡುತ್ತಾ ನಮ್ಮ ಸುತ್ತ ಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಂಪನಿಗಳ ದೂಳುನಿಂದ ಪರಿಸರ ಹಾಳು ಆಗುತ್ತದೆ. ಗ್ರಾಮಗಳನ್ನು ಅಭಿವೃದ್ಧಿ ಆಗಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಸಹಾಯಕ ಶಿಬಿರಾಧಿಕಾರಿ, ಕನ್ನಡ ಉಪನ್ಯಾಸಕರಾದ ಶಿವಪ್ರಸಾದ್ ಹಾದಿಮನಿ ಅವರು, ಆರೋಗ್ಯವೇ ನಿಜವಾದ ಸಂಪತ್ತು,ಆ ಸಂಪತ್ತನ್ನು ನಾವೆಲ್ಲರೂ ಕಾಪಾಡಿಕೊಳ್ಳಲೇಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ. ನರಸಿಂಹ, ರೋಹಿತ್ ಕುಮಾರ, ನವೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭಾಗ್ಯಲಕ್ಷ್ಮೀ ನಿರೂಪಿಸಿದರು. ಪಲ್ಲವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ದೇವಿಕಾ ಸ್ವಾಗತಿಸಿದರು. ಸೃಷ್ಟಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















