ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಹಿರೇದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ, ರಕ್ತದಾನ ಹಾಗೂ ನೇತ್ರದಾನ ಶಿಬಿರ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ
ಹುಲಿಹೈದರ ಅರಮನೆಯಲ್ಲಿ ಶ್ರೀ ಹಿರೇದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವೆ ಶೈಕ್ಷಣಿಕ ಟ್ರಸ್ಟ್ ರಿ. ಸುರಪುರ ಇವರ ಸಂಯೋಗದಲ್ಲಿ ದಿ. ರಾಜಾ ರಂಗಪ್ಪ ನಾಯಕ ವಾಲ್ಮೀಕಿ ನಾಯಕ ಸಮಾಜದ ಮೂಲ ಧರ್ಮ ಗುರುಗಳ ಸ್ಮರಣಾರ್ಥವಾಗಿ ನಡೆದ ಉಚಿತ ಆರೋಗ್ಯ ತಪಾಸಣಾ, ರಕ್ತದಾನ ಹಾಗೂ ನೇತ್ರದಾನ ಶಿಬಿರ ಉದ್ದೇಶಿಸಿ ಮಾತನಾಡಿದ ವೈದ್ಯ ಶ್ರೀ ರಾಜಾ ಚನ್ನಪ್ಪ ನಾಯಕ ಅಧ್ಯಕ್ಷರು ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವೆ ಶೈಕ್ಷಣಿಕ ಟ್ರಸ್ಟ್ (ರಿ .) ಇವರು ದುಶ್ಚಟಗಳಿಂದ ದೂರವಿರಿ ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬನೆ ಆಗಿರುತ್ತದೆ ಒಂದು ವೇಳೆ ನೀವು ಅನಾರೋಗ್ಯದಿಂದ ಬಳಲಿದರೆ ಇಡೀ ಕುಟುಂಬವೇ ಕಷ್ಟದಲ್ಲಿ ಸಿಲುಕುತ್ತದೆ. ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿಗಳಾಗಿ ಜೀವನ ಮಾಡಬೇಕು ಈಗ ಬೇಸಿಗೆ ಇರುವುದರಿಂದ ಅತಿ ಹೆಚ್ಚು ನೀರು ಕುಡಿಯಿರಿ ಅತೀ ಹೆಚ್ಚು ಅತಿ ಹೆಚ್ಚು ದ್ರವ ರೂಪದ ಆಹಾರ ಪದಾರ್ಥಗಳನ್ನು ಸೇವಿಸಿ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದು ಅತ್ಯಂತ ಅಮೂಲ್ಯವಾಗಿದೆ ನಮ್ಮ ಟ್ರಸ್ಟ್ ವತಿಯಿಂದ ಇದು ಆರನೇ ಉಚಿತ ಆರೋಗ್ಯ ಕಾರ್ಯಕ್ರಮವಾಗಿದೆ ಈ ವರ್ಷ ನಮ್ಮ ತಾತ ರಾಜಾ ರಂಗಪ್ಪ ನಾಯಕ ಅವರ ಹೆಸರಿನಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜಿಸಿ ನೂರಾರು ಜನರಿಗೆ ಉಚಿತ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದೆ ಇದನ್ನು ತಾವೆಲ್ಲರೂ ಸದುಪಯೋಗ ಮಾಡಿಕೊಂಡು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಈ ಮೂಲಕ ತಿಳಿಸಿದರು, ನಮ್ಮ ಟ್ರಸ್ಟ್ ಅಡಿಯಲ್ಲಿ ಮಕ್ಕಳ ಶಿಕ್ಷಣ ಮಟ್ಟ ಹೆಚ್ಚಿಸಲು ಕಳೆದೆರಡು ವರ್ಷದಿಂದ ಬೇಸಿಗೆ ರಜೆ ದಿನಗಳಲ್ಲಿ ರೈತಾಪಿ ಕುಟುಂಬ ಮತ್ತು ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ ಇದನ್ನು ಕಳೆದ ವರ್ಷ ಹತ್ತಾರು ಮಕ್ಕಳು ಸದುಪಯೋಗ ಮಾಡಿಕೊಂಡಿದ್ದರು, ಈ ವರ್ಷ ಕೂಡಾ ಹತ್ತಾರು ಮಕ್ಕಳು ಉಚಿತವಾಗಿ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಸಮಾಜ ನಮಗೇನು ಕೊಟ್ಟಿದೆ ಅನ್ನೋದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೀವಿ ಅನ್ನೋದು ಮುಖ್ಯ ಅದಕ್ಕಾಗಿ ನನ್ನ ಈ ಅಳಿಲು ಸಮಾಜ ಸೇವೆ ಮಾಡ್ತಾ ಇದೀನಿ. ತಮ್ಮೆಲ್ಲರ ಆಶೀರ್ವಾದ ಸಹಕಾರ ಇದ್ದರೆ ಇನ್ನೂ ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತೇನೆ ಎಂದರು. ನಿಮಗೆ ಏನಾದರೂ ಸಹಾಯ ಮಾಡಬೇಕು ಅನಿಸಿದರೆ ನಮ್ಮ ಟ್ರಸ್ಟ್ ಗೆ ಸಹಾಯ ಮಾಡಿ ಅದರಿಂದ ಸಮಾಜದಲ್ಲಿ ಬಡ ಮಕ್ಕಳ, ಅಂಧ ಅನಾಥರಿಗೆ ಸೇವೆ ಮಾಡಲು ಹೆಚ್ಚು ಶಕ್ತಿ ಬರುತ್ತದೆ ಎಂದು ತಿಳಿಸಿದರು.
ಕನಕಗಿರಿ ತಾಲೂಕಿನ ಹುಲಿಹೈದರದ ಗ್ರಾಮದೇವತೆ ಹಿರೇ ದೇವತೆ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಶ್ರೀ ಶ್ರೀ ವಾಲ್ಮೀಕಿ ಆರ್ ಸಿ ನಾಯಕ ಶೈಕ್ಷಣಿಕ ಟ್ರಸ್ಟ್ ಇವರ ಸಹಯೋಗದಲ್ಲಿ ಹುಲಿಹೈದರ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ. ಸೋಮಶೇಖರ ನಾಯ್ಕ ಇವರ ನೇತೃತ್ವದಲ್ಲಿ ಹುಲಿಹೈದರ ಗ್ರಾಮದಲ್ಲಿ ಉಚಿತ ಆಯುಷ್ ಆರೋಗ್ಯ ತಪಾಸಣಾ ಮತ್ತು ಆಯುರ್ವೇದ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು,
ಈ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಆಯುಷ್ ಅಧಿಕಾರಿಗಳಾದ ಶ್ರೀ ಪರ್ವತ ಗೌಡ ಬಿ ಹಿರೇಗೌಡರ, ಊರಿನ ಗುರುಗಳಾದ ಶ್ರೀ ರಾಜಾ ನವೀನ ಚಂದ್ರ ನಾಯಕ, ಸೋಮನಗೌಡ, ರಾಜಾ ಸುಭಾಷ್ ಚಂದ್ರ ನಾಯಕ, ಜಗದೀಶ ಗದ್ದಿ, ಗ್ರಾಮ ಪಂಚಾಯತಿ ಸದಸ್ಯರು, ಊರಿನ ಹಿರಿಯರು ಅಂಗನವಾಡಿ ಕಾರ್ಯಕರ್ತೆಯರು, ಸಿ.ಎಚ್.ಒ ಮತ್ತು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು , ಡಾ. ವಾಯ್. ಜೆ. ಶಿರವಾರ, ಡಾ. ವಿಜಯಲಕ್ಷ್ಮಿ ಮೆಹರವಾಡೆ, ಡಾ. ಮಾರುತಿ ದೊಡಮನಿ, ಡಾ. ವಿಜಯಶ್ರೀ, ಫಾರ್ಮಾಸಿಸ್ಟ್ ರಾಮಕುಮಾರ್, ಶ್ರೀಕಾಂತ ಬಲಿ ಮತ್ತು ಮಂಜುನಾಥ ಔಷಧಿ ವಿತರಿಸಿದರು.
ಪರಶುರಾಮ ಮತ್ತು ಜಗದೀಶಪ್ಪ ಉಪಸ್ಥಿತರಿದ್ದರು.
ಹುಲಿಹೈದರ್ ಆಯುಷ್ಮಾನ ಆರೋಗ್ಯ ಮಂದಿರದ ರಮೇಶ, ಸಿ ಎಹ್ ಓ ಸಮೀರ, ಸಿದ್ರಾಮಪ್ಪ, ಸಿಬ್ಬಂದಿಯವರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಬಿ.ಪಿ, ಮಧುಮೇಹ ಪರೀಕ್ಷೆ ಮಾಡಲಾಯಿತು. ಹಾಗೂ ರೋಹಿತ್ ಚವ್ಹಾನ ಅಧ್ಯಕ್ಷರು, ಡಾ. ದತ್ತು ವೈಕುಂಠೇ ಸಂಯೋಜಕರು ಹಾಗೂ ಸಿಬ್ಬಂದಿ ಅಂಬಿಕಾ ರಕ್ತ ನಿಧಿ ಕೇಂದ್ರ ಗದಗ ರಕ್ತ ದಾನ ಶಿಬಿರವನ್ನು ಏರ್ಪಡಿಸಿ ಯಶಸ್ವಿಗೊಳಿಸಿದರು.

ವರದಿ ಹನುಮಂತಪ್ಪ ನಾಯಕ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!