ಸಿರುಗುಪ್ಪ – ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಎಲ್ಲರನ್ನೂ ಒಂದೇ ಎಂಬ ಏಕತಾ ಭಾವಕ್ಕೆ ತಂದವರು ಮಹಾನ್ ಮಾನವತಾವಾದಿ ಸಾಂಸ್ಕೃತಿಕ ನಾಯಕ ಬಸವೇಶ್ವರರು ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಜೆ ನಾಗೇಂದ್ರ ಗೌಡ ಅವರು ಹೇಳಿದರು.
ಸಿರುಗುಪ್ಪ ತಾಲೂಕು ಅರಳಿಗನೂರು ಗ್ರಾಮದಲ್ಲಿ ವೀರಶೈವ ಲಿಂಗಾಯಿತ ಎಲ್ಲಾ ಸಮುದಾಯದವರ ಸಮ್ಮುಖದಲ್ಲಿ 893 ನೇ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪದೊಂದಿಗೆ ಗೌರವಿಸಿ ಸ್ಮರಿಸುವ ಮೂಲಕ ನಮನ ಸಮರ್ಪಿಸಿದರು ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡುತ್ತಾ ವಿಶ್ವಗುರು ಶ್ರೇಷ್ಠ ವಚನಕಾರ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲ್ಪಟ್ಟಿರುವ ಬಸವಣ್ಣನವರ ಜನ್ಮದಿನೋತ್ಸವವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಕರೆ ನೀಡಿದ ಅವರು 12ನೇ ಶತಮಾನದಲ್ಲೆ ಸಮಾನತೆ ಏಕತೆ ಮತ್ತು ಕಾಯಕವೇ ಕೈಲಾಸ ಎಂಬ ಉದಾತ್ತ ತತ್ವಗಳನ್ನು ಸಾರಿದ ಮಹಾನ್ ಚೇತನರು ಬಸವಣ್ಣ ಇವರ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಅವರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಹೆಚ್ ಮಲ್ಲಿ ಗೌಡ ಆರ್ ಧರ್ಮನ ಗೌಡ ಎಚ್ ಶಿವಮೂರ್ತಿ ಗೌಡ ಜಿ ಮಲ್ಲಿ ಗೌಡ ಜೆ ಬಸವರಾಜಣ್ಣ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಉಪ್ಪಾರ ಹೊಸಳ್ಳಿ ಹಿರಿಯರು ಕಿರಿಯರು ಗಣ್ಯರು ಯುವಕರು ಯುವತಿಯರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















