ಶಿವಮೊಗ್ಗ : ಎನ್‌ಎಸ್‌ಎಸ್ ಶಿಬಿರವು ಕೇವಲ ಸೇವಾ ಚಟುವಟಿಕೆ ಮಾತ್ರವಲ್ಲ, ಅದು ವ್ಯಕ್ತಿತ್ವ ವಿಕಾಸದ ಒಂದು ಮಹತ್ವದ ವೇದಿಕೆ. ಸಮಾಜದೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮನೋಭಾವವನ್ನು ನೀವು ಇಲ್ಲಿ ಕಲಿಯುತ್ತೀರಿ ಎಂದು ಐಪಿಎಸ್ ಅಧಿಕಾರಿ ಶ್ರೀಮತಿ ಮೇಘಾ ಅಗರವಾಲ್ ತಿಳಿಸಿದರು.
ಅವರು ಭದ್ರಾವತಿ ತಾಲೂಕು ವಿಜಯನಗರ ಕಾಚಿಗೊಂಡನಹಳ್ಳಿ ಕೊರಮಾರನಹಳ್ಳಿ ಗ್ರಾಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ವತಿಯಿಂದ ಸಾಮಾಜಿಕ ಕಾರ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದೇಶದ ಯುವಜನತೆ ಬಲವಾದರೆ ದೇಶ ಬಲವಾಗುತ್ತದೆ. ಆದ್ದರಿಂದ, ನಿಮ್ಮ ಶಕ್ತಿ ಮತ್ತು ಸಮಯವನ್ನು ಸಮಾಜದ ಸೇವೆಗೆ ಮೀಸಲಿಟ್ಟು, ಉತ್ತಮ ನಾಗರಿಕರಾಗಿ ಬೆಳೆದು ಬರಬೇಕು ಎಂದರು.
ಈ ಶಿಬಿರದಿಂದ ನೀವು ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಸೇವೆ ಸಣ್ಣದಾಗಿದ್ದರೂ, ಅದರ ಪರಿಣಾಮ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಮಾರನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಧುರಾವ್.ಆರ್ ವಹಿಸಿದ್ದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಆರ್, ಮುಖ್ಯ ಶಿಕ್ಷಕ ಎಸ್. ಸಿದ್ದರಾಮಯ್ಯ, ಗ್ರಾಮ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸವಿತಾ, ಬಸವ, ಉಪನ್ಯಾಸಕರಾದ ಬಿ.ಜಿ.ರವಿಶಂಕರ್ ಇದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್ , ಶಿವಮೊಗ್ಗ




















