ನಾಡಿನ ಜನತೆಗೆ ”ರಾಜ್” ಉತ್ಸವದ ಶುಭಾಶಯಗಳು.
ಮುತ್ತುರಾಜನಾಗಿ ಬಂದು
ಮುತ್ತಿನಂತ ಕಥೆಗಳ ಹೇಳಿ ರಾಜನಾಗಿ ಮೆರೆದು ಬಿಟ್ರು
ರಾಜಕುಮಾರ.
ಅಭಿಮಾನಿಗಳೇ ದೇವ್ರು ಅಂದ್ರು
ಅಭಿಮಾನಿಗಳ ದೇವ್ರು ಆದ್ರು
ದೇವರಿಗೆ ನಟನೆ ಕಲಿಸೋ
ರಾಜಕುಮಾರ.
ಜೀವನವೆಲ್ಲ ನಾಡು ನುಡಿಗೆ
ಮೇರು ಶಿಖರ ಗಂಧದ ಗುಡಿಗೆ
ಮೇರು ನಟ ಎನಿಸಿಕೊಂಡ
ರಾಜಕುಮಾರ.
ಎಂಥ ಚಂದ ಕೋಗಿಲೆ ಕಂಠ
ಗೋಕಾಕ ಚಳವಳಿ ಕನ್ನಡ ಭಂಟ
ನಾಡಿಗೋಸ್ಕರ ನಾಡಿಯಾದ
ರಾಜಕುಮಾರ.
ಬಿರುದುಗಳ ಸರದಾರ
ಅವರೇ ನಮ್ಮ ಸರಕಾರ
ಕರ್ನಾಟಕದ ರಾಯಭಾರಿ
ರಾಜಕುಮಾರ.
ಸಾವಿರ ವರ್ಷ ಉರುಳಲಿ
ಕನ್ನಡ ಜ್ಯೋತಿ ಬೆಳಗಲಿ
ಕನ್ನಡ ಅಂದ್ರೆ ಕಾಣುತ್ತಾರೆ
ರಾಜಕುಮಾರ.
✍️ ಚಿರಂಜೀವಿ ರೋಡಕರ್.




















