ತಂಗಾಳಿಯಲಿ ನೆತ್ತಿಗೆ ತಾಗಿತು ಮರದ ಗರಿಗಳು
ತಲೆಯೆತ್ತಿ ನೋಡಲು ಅಲ್ಲಲ್ಲಿ ಕೆಂಪಿನಾ ಮಣಿಗಳು
ಸ್ಪರ್ಷಕೆ ಉದುರಿತ್ತು ಕೆಂಬಣ್ಣದ ಪುಟ್ಟ ಹಣ್ಣುಗಳು
ಸವಿಯಲಾಗಿತ್ತು ಅವುಗಳೇ ಗಸಗಸೆ ರಸ ಕ್ಷಣಗಳು
ಬಾಲ್ಯದಿ ಜಿಗಿದು ಕಿತ್ತು ಮೆಲ್ಲುತಿದ್ದ ಆ ದಿನಗಳು
ನೆನಪಾಗಿ ಒದ್ದೆಯಾದವು ಎನ್ನ ಕಣ್ಣಾಲಿಗಳು
ಜೋಡಿಸಿದೆ ಜೊತೆಯಲಿ ದೊಡ್ಡಪತ್ರೆ ಎಲೆಗಳು
ಸೇರಿಸಿದೆ ಶ್ವೇತತುಂಬೆ ಸಂಜೆಮಲ್ಲಿಗೆ ಮೊಗ್ಗುಗಳು
ಮನ ಬಯಸಿತು ಹಂಚಿಕೊಳ್ಳಲು ಸುಪ್ರಭಾತದೊಳು
ತಮಗಿದೊ ಸುಲಲಿತ ಕಾವ್ಯ ಚಿತ್ತಾರದ ಶುಭ ನಮನಗಳು
- ಲಲಿತಾ ಕೆ ಆಚಾರ್, ಬೆಂಗಳೂರು




















