ತಾಳಿಕೋಟೆ ಪಟ್ಟಣದ ಬಸವೇಶ್ವರ ಮಾರ್ಕೆಟ್ ಯಾರ್ಡ್ ಹಮಾಲರ ಸಂಘದ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಮಾಲರ ಸಂಘದ ಅಧ್ಯಕ್ಷರಾದ ಸೂಫಿಸಾಬ್ ಪತ್ತೆಖಾನ್ ಅವರು ಮಾತನಾಡಿ, ಕಾರ್ಮಿಕರ ಶ್ರಮವೇ ದೇಶದ ಅಭಿವೃದ್ಧಿಗೆ ಬೆನ್ನೆಲುಬಾಗಿದೆ ಎಂದು ಹೇಳಿದರು. ದುಡಿಯುವ ವರ್ಗದ ಹಕ್ಕುಗಳು, ಗೌರವ ಮತ್ತು ಏಕತೆಯ ಮಹತ್ವವನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಮಾಲರ ಸಂಘದ ಉಪಾಧ್ಯಕ್ಷರಾದ ಯಮನಪ್ಪ ಬರದೇನಾಳ ಸೇರಿದಂತೆ ಸದಸ್ಯರಾದ ಈರಪ್ಪ ನಾಯ್ಕೋಡಿ, ಶರಣಪ್ಪ ಹಿರೇಕುರುಬರ, ಕಾಶಿನಾಥ್ ಬಿರಾದಾರ್, ಕಾಶಿನಾಥ್ ವಾಲಿಕರ್, ಶಂಕರ್ ಮುಕಿಹಾಳ್, ಬಸವರಾಜ ದೇವದುರ್ಗ, ಬಶೀರ್ ದೋಣಿ, ದೇವಪ್ಪ ಅಲ್ಲಪುರ, ಸೈಪನ್ ಕಲಕೇರಿ, ಸಂಜು ಬರೆದೇನಾಳ, ಮಲ್ಲು ಗೊಡಗುಣಕಿ, ತಿಪ್ಪಣ್ಣ ಭಜಂತ್ರಿ, ಗೋವಿಂದ ಬೆಳೆಬಾವಿ, ಮಲ್ಲಪ್ಪ ಗುಡ್ನಾಳ, ಮೆಹಬೂಬ್ ಅಂಬಲೂರ, ಜಮಿಲ್ ನಮಾಜ್ ಕಟ್ಟಿ, ರಜಾಕ ಕಲಕೇರಿ, ಹನುಮಂತ ಪೂಜಾರಿ, ಮಲ್ಲಿಕಾರ್ಜುನ್ ಕಟ್ಟಿಮನಿ, ಬೀರಪ್ಪ ಪೂಜಾರಿ, ರಸುಲ್ ಸಾಬ್ ಬ್ಯಾನಳ್, ಸಿದ್ದಪ್ಪ ಅಲ್ಲಪುರ, ಬಸಪ್ಪ ಕೊಚ್ಚಿ ಹಾಗೂ ಹಲವಾರು ಮುಖಂಡರು ಮತ್ತು ಹಮಾಲರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಮಿಕರ ಏಕತೆ, ಹಕ್ಕುಗಳು ಮತ್ತು ಶ್ರಮದ ಗೌರವವನ್ನು ಸಾರುವ ಈ ಕಾರ್ಯಕ್ರಮವು ಎಲ್ಲರಲ್ಲೂ ಹೊಸ ಉತ್ಸಾಹ ಮೂಡಿಸಿತು.
ವರದಿ: ನಜೀರ್ ಚೋರಗಸ್ತಿ




















