ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೇಂದ್ರ ಸರ್ಕಾರ ಬಂಡವಾಳಶಾಹಿ ಪರ : ಕಾರ್ಮಿಕರ, ರೈತ ಬದುಕು ಕಷ್ಟಕರ : ಡಿ.ಮುನಿಸ್ವಾಮಿ ಅಭಿಮತ

ಬಳ್ಳಾರಿ / ಕಂಪ್ಲಿ: ಪಟ್ಟಣದ ಸಂತೆ ಮಾರುಕಟ್ಟೆಯ ಒನಕೆ ಓಬವ್ವ ವೃತ್ತದಲ್ಲಿ ಬೌದ್ಧ ಸಮಾಜ, ಕಟ್ಟಡ ಕಾರ್ಮಿಕ ಸಂಘ, ಛಲುವಾದಿ ಮಹಾಸಭಾ, ಸ್ಮಶಾನ ಕಾರ್ಮಿಕ ಸಂಘ ಮತ್ತು ರೈತ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ಭಗವಾನ್ ಗೌತಮ ಬುದ್ಧ ಜಯಂತಿ ಸಂಬ್ರಮದಿಂದ ಅಚರಿಸಲಾಯಿತು.
ಕಾರ್ಮಿಕ ಸಂಘದ ಹಿರಿಯ ಮುಖಂಡ ಡಿ.ಮುನಿಸ್ವಾಮಿ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಕಾರ್ಮಿಕರು ನಾನಾ ವಿಧದಲ್ಲಿ ಶ್ರಮಜೀವಿಗಳಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನಡೆಯಿಂದ ಬಡ ಕಾರ್ಮಿಕರ ಬದುಕು ಸಂಕಷ್ಟದಲ್ಲಿ ಸಾಗುವಂತಾಗುತ್ತಿದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಕೆಲಸ ನಿರ್ವಹಿಸುವ ಜೊತೆಗೆ ಅತಿಹೆಚ್ಚಾಗಿ ಪ್ರತಿಯೊಂದು ರಂಗದಲ್ಲಿ ಖಾಸಗೀಕರಣಕ್ಕೆ ಮುಂದಾಗುವ ಮೂಲಕ ಬಡ, ಮಧ್ಯಮ ವರ್ಗದ ಹೊಟ್ಟೆ ಮೇಲೆ ಬರೆ ಎಳೆದಿದೆ. ರೈತರ, ಕಾರ್ಮಿಕರ ವರವಾಗಿದ್ದ 44 ಕಾಯ್ದೆಗಳಲ್ಲಿ 40 ಕಾಯ್ದೆಗಳನ್ನು ತೆಗೆದಿರುವುದು ಭಾರತ ದೇಶದ ಬಡ ಕಾರ್ಮಿಕರ ದುರಂತಕ್ಕೆ ಕಾರಣವಾಗಿದೆ. ಇದರಿಂದ ಮುಂಬರುವ ದಿನದಲ್ಲಿ ಕಾರ್ಮಿಕರ ಬದುಕು ಇನ್ನಷ್ಟು ಕಠಿಣವಾಗಲಿದೆ. ಆದ್ದರಿಂದ ಕೂಡಲೇ ಬಡ ಕಾರ್ಮಿಕರು ಎಚ್ಚೆತ್ತು, ಒಗ್ಗೂಡಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವ ಮೂಲಕ ತೆಗೆದ 40 ಕಾಯ್ದೆಗಳನ್ನು ಮರುಕಳಿಸಿ ಜಾರಿಗೆ ತರಬೇಕಾಗಿದೆ. ಕಾರ್ಮಿಕರ 12 ತಾಸಿನ ಕೆಲಸ ಅವೈಜ್ಞಾನಿಕವಾಗಿದೆ. ಆದ್ದರಿಂದ 8 ತಾಸು ಕೆಲಸ ಮಾಡುವುದು ವೈಜ್ಞಾನಿಕವಾಗಿದೆ. ಯಾವುದೇ ಸರ್ಕಾರವಿರಲಿ, ದೇಶದ ಪ್ರತಿಯೊಬ್ಬ ಕಾರ್ಮಿಕರ, ರೈತರ ಬದುಕಿಗೆ ಆಸೆಯಾಗುವ ಜೊತೆಗೆ ಅನುಕೂಲವಾಗುವ ಕಾಯ್ದೆ, ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರ, ಬೌದ್ಧ ಸಮಾಜದ ಜಿಲ್ಲಾಧ್ಯಕ್ಷ ಸುಗ್ಗೇನಹಳ್ಳಿ ರಮೇಶ, ಉಪಾಧ್ಯಕ್ಷ ಪುಟಾಣಿ ಅಂಜಿನಪ್ಪ, ಮುಖಂಡರಾದ ಮಾನ್ವಿ ಮಹೇಶ, ಎಂ.ಸಿ.ಮಾಯಪ್ಪ, ಚನ್ನಬಸುವರಾಜ, ವಸಂತರಾಜ್ ಕಹಳೆ, ಬಿ.ನಾಗೇಂದ್ರ, ಬಂಡಿ ಬಸವರಾಜ, ಹೊನ್ನೂರಸಾಬ್, ಎಂ.ಸಿ.ನಿಂಗಪ್ಪ, ಡಿ.ಮುರಾರಿ, ನಾಯಕರ ತಿಮ್ಮಪ್ಪ, ನಾಗರಾಜ, ಕೊಟ್ಟೂರು ರಮೇಶ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!