ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾರ್ಥಿಗಳು ಸಾಹಿತ್ಯದ ಗ್ರಂಥಗಳನ್ನು ಅವಲೋಕನ ಮಾಡಲಿ: ಮಲ್ಲಿಕಾರ್ಜುನ ಸಜ್ಜನರ

ಬಾಗಲಕೋಟೆ : ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳೊಟ್ಟಿಗೆ ನಾಡಿನ ಸಾಧಕರ ಜೀವನ ಚರಿತ್ರೆ, ಆತ್ಮ ಚರಿತ್ರೆ ಕೃತಿಗಳು ಸೇರಿದಂತೆ ಹಲವಾರು ಆಯಾಮದ ಸಾಹಿತ್ಯದ ಗ್ರಂಥಗಳನ್ನು ಅವಲೋಕನ ಮಾಡಿಕೊಂಡು ತಮ್ಮ ಓದಿನ ಜ್ಞಾನದ ಹರವು ವಿಸ್ತಾರಗೊಳ್ಳುವಂತೆ ಮಾಡಬೇಕೆಂದು ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ಇಂಗ್ಲೀಷ ಸ್ನಾತ್ತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಎಸ್. ಸಜ್ಜನರ ಹೇಳಿದರು.
ತಾಲೂಕಿನ ಬೇವೂರಿನ ಪಿಎಸ್. ಸಜ್ಜನ ಕಾಲೇಜಿನ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭದ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಜಾಗತಿಕ ಮಟ್ಟದಲ್ಲಿ ಇಂಗ್ಲೀಷ ಭಾಷೆಗೆ ಮನ್ನಣೆ ಇರಲಾಗಿದ್ದು ಪ್ರಾದೇಶಿಕ ಭಾಷೆಗಳೊಟ್ಟಿಗೆ ಆಂಗ್ಲ ಭಾಷೆಯ ತಿಳುವಳಿಕೆ ಪಡೆಯುವದು, ಅಧ್ಯಯನ ನಡೆಸುವುದು ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷ್ಯತೆ ವಹಿಸಿ ಮಾತನಾಡಿದ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘದ ಸದಸ್ಯರಾದ ಐ.ಜಿ. ಕಡೇಮನಿ ವಿದ್ಯಾರ್ಥಿಗಳು ತಂದೆ ತಾಯಿ ಗುರುಗಳ ಋಣವನ್ನು ತೀರಿಸಲು ಉತ್ತಮ ಸಂಸ್ಕಾರ ರೂಪಿಸಿಕೊಳ್ಳಬೇಕು. ಜ್ಞಾನಾರ್ಜನೆಗೆ ಅವಕಾಶ ನೀಡಿದ ಮಹಾವಿದ್ಯಾಲಯದ ಸ್ಮರಣೆಯನ್ನು ನಿರಂತರವಾಗಿ ಮಾಡಬೇಕು. ಪದವಿಪಡೆದ ಎಲ್ಲರೂ ಸಮಾಜದ ಉನ್ನತ ಸ್ಥಾನಗಳಲ್ಲಿ ಬೆಳೆಯಬೇಕೆಂದು ಹೇಳಿದರು. ಗುರು ಶಿಷ್ಯ ಪರಂಪರೆಯ ಸಂಬಂಧ ಶ್ರೇಷ್ಠವಾದದ್ದು ಎಂದು ಕನ್ನಡ ವಿಭಾಗದ ಉಪನ್ಯಾಸಕ ಡಾ.ಎಸ್.ಬಿ. ಹಂಚಿನಾಳ ಹೇಳಿದರು. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಬೆಳಗಲು ಅಧ್ಯಯನ ಸಂಸ್ಕಾರ ಮೌಲ್ಯಗಳು ಅವಶ್ಯಕ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಎ ಅಂತಿಮ ವರ್ಷದ ವಿದ್ಯಾರ್ಥಿ ಪ್ರತಿನಿಧಿಗಳಾದ ವಿಜಯಲಕ್ಷ್ಮೀ. ಯ ಬಂಡಿವಡ್ಡರ, ಸಿದ್ದಪ್ಪ ಆಲಗುಂಡಿ ಅನಿಸಿಕೆ ನುಡಿಗಳನ್ನಾಡಿದರು. ಹಿರಿಯ ಉಪನ್ಯಾಸಕ ಬಿ.ಬಿ. ಬೇವೂರ ವಚನ ಪಾರ್ಥನೆ ನೇರವೇರಿಸಿದರು. ಜ್ಯೋತಿ ಗೌಡರ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಎಸ್.ಎಸ್ ಆದಾಪೂರ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಿಕೊಟ್ಟರು. ಎನ್.ಎಸ್.ಎಸ್ ವಿಭಾಗದ ಕಾರ್ಯಕ್ರಮಾಧಿಕಾರಿ ಜಿ.ಎಸ್ ಗೌಡರ ಕ್ರೀಡಾ ವಿಭಾಗದ ಪ್ರಶಸ್ತಿ ವಿತರಣಾ ಸಮಾರಂಭ ನಡೆಸಿಕೊಟ್ಟರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ್ಯ ಡಾ.ಆದಪ್ಪ ಗೊರಚಿಕ್ಕನವರ ಸಾಂಸ್ಕೃತಿಕ ವಿಭಾಗದ ಪ್ರಶಸ್ತಿ ಪತ್ರಗಳ ವಿತರಣೆ ನಡೆಸಿಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗದೀಶ ಗು.ಭೈರಮಟ್ಟಿ ಉಪಸ್ಥಿತರಿದ್ದರು. ಕಲಾವಿದೆ ಪವಿತ್ರಾ ಜಕ್ಕಪ್ಪನವರ ತಂಡದಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಿತು. ಅಶ್ವಿನಿ ಕುರಿ ಸ್ವಾಗತಿಸಿದರು. ಜ್ಯೋತಿ ಭೈರಮಟ್ಟಿ ಮಾಲಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು. ಲಕ್ಷ್ಮೀಬಾಯಿ ಮಾದರ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನಿ ವ. ಮಾದರ, ಭಾಗೀರಥಿ ಪಿ. ಬಾರಕೇರ ನಿರೂಪಿದರು. ಸಂಜನಾ ಕೊಡಗಲಿ ವಂದಿಸಿದರು. ಸಮಾರಂಭದ ನಂತರ ವರ್ಣರಂಜಿತ ಪಟಾಕಿಗಳ ಸದ್ದಿನೊಂದಿಗೆ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳು ಬ್ಯಾನರ ಅನಾವರಣಗೊಳಿಸಿ ಸಂಭ್ರಮಿಸಿದರು. ಇಂಗ್ಲೀಷ ಉಪನ್ಯಾಸಕ ಡಿ.ವಾಯ್.ಬುಡ್ಡಿಯವರ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಶ್ವೇತಾ ಕಾಗಿಯವರ ಬೋಧಕೇತರ ಸಿಬ್ಬಂದಿ ಆರ್. ಬಿ. ಕರಡಿಗುಡ್ಡ, ಶಿವು ಕಟಗಿ, ಪ್ರದೀಪ ಪವಾಡಶೆಟ್ಟರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅರ್ಥಶಾಸ್ತ್ರ ವಿಭಾಗದ ವತಿಯಿಂದ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದ ವಿಜಯಲಕ್ಷ್ಮೀ ಬಂಡಿವಡ್ಡರ, ಜ್ಯೋತಿ ಗೌಡರ, ಪವಿತ್ರಾ ಮಾಗನೂರ, ಫಾತಿಮಾ ನಧಾಪ ವಿದ್ಯಾರ್ಥಿನಿಯರಿಗೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್. ಆದಾಪೂರ ಅವರು ಗೌರವ ಸತ್ಕಾರ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಕೊಡಮಾಡಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!