
ಬಳ್ಳಾರಿ / ಕಂಪ್ಲಿ : ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಬಡವರ ಆರ್ಥಿಕ ಹೊರೆ ತಗ್ಗುತ್ತದೆ. ಇದರಿಂದ ವರದಕ್ಷಿಣಿ ಪಿಡುಗು ಕಡಿಮೆಯಾಗುವ ಮೂಲಕ ಜೀವನ ಸುಮಧುರವಾಗಿರುತ್ತದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕಂಡಲೇರು ಗೋತ್ರದ ಶ್ರೀ ನೀಲಿಗಿರಿಮಾನ್ಯ ಮತ್ತು ಶ್ರಿ ನೀಲಿಗಿರಿಮಾನ್ಯ ಪಟ್ಟದ ದೇವರ ಕಾರ್ಯಕ್ರಮದ ಶ್ರೀ ನೀಲಿಗಿರೇಶ್ವರ ಪಟ್ಟದ ದೇವರು, ವಸಿಗೇರಪ್ಪ, ಮಲ್ಲೇಶ್ವರ, ಬೀರಲಿಂಗೇಶ್ವರ, ಹೀರಲಿಂಗೇಶ್ವರ, ನೀಲಿಗಿರೇಶ್ವರ ಸಿರವಾರ, ನೀಲಿಗಿರೇಶ್ವರ ಹುಲಕುರ್ತಿ, ಮಲೇಶ್ವರ ಹುಲಕುರ್ತಿ, ಮುರುಗಿಸಿದ್ದೇಶ್ವರ ಹುಲಕಿರ್ತಿ ದೇವರ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು-ವರರಿಗೆ ಆಶೀರ್ವಾದಿಸಿದ ನಂತರ ಮಾತನಾಡಿದರು.
ಪಟ್ಟದ ದೇವರ ಕಾರ್ಯಕ್ರಮದ ಸನ್ನಿಧಾನದಲ್ಲಿ ಮದುವೆಯಾದವರು ಗುರುಹಿರಿಯರನ್ನು ಗೌರವಿಸುವ ಮೂಲಕ ಆದರ್ಶ ದಂಪತಿಗಳಾಗಿ ಬಾಳಬೇಕು’ ಎಂದು ತಿಳಿಸಿದರು.
ಹರಿಗಿಡೋಣ ಅಭಿನವ ಸಿದ್ದಲಿಂಗಸ್ವಾಮಿ, ಒಡೆಯರು ಶರಣಯ್ಯ ಸ್ವಾಮಿ, ರೋಹಿತ್ ಸ್ವಾಮಿ, ಗುರುಲಿಂಗಯ್ಯ ಸ್ವಾಮಿ, ಅಮಾಜಯ್ಯಸ್ವಾಮಿ, ವಿರುಪಾಕ್ಷಯ್ಯಸ್ವಾಮಿ, ಜಂಬಯ್ಯಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಉಚಿತ ಸಾಮೂಹಿಕ ವಿವಾಹಗಳು ನೆರವೇರಿದವು.
ಬೆಳಿಗ್ಗೆ ಸಕಲ ವಾದ್ಯ ವೈಭವಗಳೊಂದಿಗೆ ಗಂಗೆಪೂಜೆ ಮತ್ತು ಮೆರವಣಿಗೆ ನಡೆಯಿತು. ನಂತರದ ಸಾಮೂಹಿಕ ವಿವಾಹದಲ್ಲಿ 33 ಜೋಡಿಗಳು ನೂತನ ವಸಂತಕ್ಕೆ ಕಾಲಿಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಶ್ರೀನಿವಾಸರಾವ್, ಗೌಡ್ರು ಮರೇಗೌಡ, ಗೌಡ್ರು ಅಂಜಿನಪ್ಪ, ವಿರೇಶಗೌಡ, ಲಿಂಗನಗೌಡ, ತಿಪ್ಪನಗೌಡ, ಸಿದ್ದಯ್ಯ, ಸುರೇಶಗೌಡ, ಉಮೇಶಗೌಡ ಸೇರಿದಂತೆ ಕಂಡಲೇರು ಗೋತ್ರದ ಸಹೋದರರು, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















