ಬೈಲಹೊಂಗಲ: ತಂದೆ ತಾಯಿಗಳು ನೀಡಿದ ಜೀವನಕ್ಕೆ ಯಾರೂ ಕಸಿದುಕೊಳ್ಳದ ಶಿಕ್ಷಣ ಎಂಬ ಜ್ಞಾನದ ಆಯುಧ ಗುರುವಿನಿಂದ ಗಳಿಸಿಕೊಂಡವನು ತನ್ನ ಗುರಿಸಾಧನೆ ಮಾಡಬಲ್ಲ ಎಂದು ವಿಶ್ರಾಂತ ಶಿಕ್ಷಕ ಈರಣ್ಣ ಬೆಂಡಿಗೇರಿ ಹೇಳಿದರು.
ಸಮೀಪದ ಹೊಸೂರ ಗ್ರಾಮದ ಎಸ್.ಎನ್.ವಿ.ವಿ.ಎಸ್. ಸಂಸ್ಥೆಯ 2006-07ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಮರಡಿಬಸವೇಶ್ವರ ಸಭಾಭವನದಲ್ಲಿ ರವಿವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ, ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯವಾಗಲು ಉತ್ತಮ ಶಿಕ್ಷಕರ ಅಗತ್ಯವಿದೆ. ಹೆತ್ತ ತಂದೆ ತಾಯಿ ವಿದ್ಯೆ ಕಲಿಸಿದ ಗುರು ಹಾಗೂ ಜನ್ಮಭೂಮಿಯನ್ನು ಎಂದು ಮರೆಯಬಾರದು. ಶಿಕ್ಷಕರು ಮಕ್ಕಳಿಗೆ ತಾಯಿಯ ಪ್ರೀತಿ ನೀಡಿ ಜ್ಞಾನದೊಂದಿಗೆ ಕಲಿಸುವ ಚಾರಿತ್ರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗುರುವಂದನಾ ಕಾರ್ಯಕ್ರಮದಲ್ಲಿ 2006-07ನೇ ಸಾಲಿನ ವಿಧ್ಯಾರ್ಥಿಗಳಿಗೆ ಭೊದನೆ ಮಾಡಿದ್ದ ವಿಜ್ಞಾನ ಶಿಕ್ಷಕ ಎಫ್.ಎಸ್. ಸಿದ್ದನಗೌಡರ, ವಿಶ್ರಾಂತ ಮುಖ್ಯೋಪಾಧ್ಯಾಯ ಎನ್.ಡಿ.ಮಾಸ್ತಮ್ಮನವರ ಮಾತನಾಡಿ, ಭಾರತ ಗುರುಪರಂಪರೆಯ ದೇಶ, ಗುರುಗಳಿಗೆ ಇದ್ದಷ್ಟು ಗೌರವ ಯಾವುದೆ ಉನ್ನತವಾದ ಹುದ್ದೆಗೂ ಇಲ್ಲ. ಗುರುಗಳು ನಮ್ಮ ಕಣ್ಣಿಗೆ ಕಾಣುವ ಮಾತೃದೇವರು. ಶಿಕ್ಷಣದ ಜೋತೆಗೆ
ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ತಾವು ಮಾಡುವ ಕೈಂಕರ್ಯವೇ ದೊಡ್ಡ ಪುರಸ್ಕಾರ. ವಿದ್ಯಾರ್ಜನೆ ಮಾಡಿ 20 ವರ್ಷಗಳ ನಂತರ ಕಲಿಸಿದ ಗುರುಗಳನ್ನು ನೆನಪಿಸಿ ಸತ್ಕರಿಸಿದ ವಿದ್ಯಾರ್ಥಿಗಳ ಕಾರ್ಯ ಉತ್ತಮ ಶಿಕ್ಷಕರಿಗೆ ಸಂದ ಗೌರವವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದ್ದು ಸಮಾನತೆಯ ಸಹಬಾಳ್ವೆಯ ಕಳಂಕ ರಹಿತ ಸಮಾಜ ನಿರ್ಮಾಣಕ್ಕೆ ಅನಿಯಾಗಲಿದೆ ಎಂದರು.
ಉಪನ್ಯಾಸಕ ಎಸ್.ಕೆ.ಮೆಳ್ಳಿಕೇರಿ ಮಾತನಾಡಿ, ಸರ್ಕಾರಿ, ಅರೆಸರ್ಕಾರಿ, ಖಾಸಗಿ ನೌಕರಿ ಆಸೆಗಾಗಿ ವಿದ್ಯೆ ಕಲಿಯದೆ ಕಲಿತ ವಿದ್ಯೆಯನ್ನು ನಾವು ಮಾಡುವ ಕೃಷಿ ಕಾರ್ಯದಲ್ಲಿ ಉಪಯೋಗಿಸಿ ಎಲ್ಲರಕ್ಕಿಂತ ವಿಭಿನ್ನವಾಗಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಬೇಳೆ ಬೆಳೆಯುವ ಯುವ ರೈತರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಕೆ.ಮೆಳ್ಳಿಕೇರಿ, ಮಹಾಂತೇಶ ಬೋಳೆತ್ತಿನ, ನಾಗರಾಜ ವರದಾಯಿ, ಮಾತನಾಡಿದರು.
ಕಾರ್ಯಕ್ರಮದ ಮುಂಚೆ ಎಲ್ಲಾ ಶಿಕ್ಷಕರು ವರ್ಗಭೊದನೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ 20ವರ್ಷದ ಹಿಂದಿನ ವಿದ್ಯಾರ್ಥಿ ಜೀವನ ನೆನೆದು ಕಲಿತ ಶಾಲೆಯ ಹಳೆಯ ನೆನಪು ಮೆಲಕು ಹಾಕಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಜಿ.ಎಸ್.ಬೋಳೆತ್ತಿನ, ಈಶ್ವರ ಮದಲಭಾಂವಿ, ಸುರೇಶ ಹಾವಳ, ರವಿ ವಕ್ಕುಂದ, ಎಲ್.ಬಿ.ಜಮಾದಾರ, ಬಸವರಾಜ ಗಾಣಿಗೇರ, ರವಿ ರೊಟ್ಟಿ, ಕಿರಣ ಅಸೋದೆ, ಡಿ.ಡಿ.ನದಾಫ್ ಶಿಕ್ಷಕಿಯರಾದ ಲಕ್ಷ್ಮೀ ಜಾಡಪ್ಪಗೊಳ, ಪಾರ್ವತಿ ಕರಡಿಗುದ್ದಿ, ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಬಸವರಾಜ ವಿವೇಕಿ, ಪ್ರಶಾಂತ ಮಾಕಿ, ಸಂತೋಷ ಮುತವಾಡ, ಮಂಜುನಾಥ ಸಂಗೋಳ್ಳಿ ಬಸವರಾಜ ಜಡಿ, ಶಿವಾನಂದ ಬೋಳೆತ್ತಿನ, ಈರಣ್ಣ ಹುರಳಿ, ಬಸವರಾಜ ಪಟಾತ, ಈಶ್ವರ ಕರಿಕಟ್ಟಿ, ಚಿದಾನಂದ ಪಾಟೀಲ, ಸುದೀಪ ವಿವೇಕಿ ಬಸಪ್ಪ ನಾಯ್ಕರ, ಕಿರಣ ಏಣಗಿ, ಶಿವರಾಜ ಬೂದಿಹಾಳ, ರಂಜೀತಾ ಬೋಳೆತ್ತಿನ, ಶಿಲ್ಪಾ ಕುಸಲಾಪೂರ, ಜ್ಯೋತಿ ಬೋಳೆತ್ತಿನ, ಪಾರ್ವತಿ ಸಿದ್ದನಗೌಡರ, ಪ್ರೇಮಾ ಚಿಕ್ಕೊಪ್ಪ, ದ್ರಾಕ್ಷಾಯಣಿ ಮತ್ತಿಕೊಪ್ಪ, ಮಲ್ಲಮ್ಮ ಬೆಂಡಿಗೇರಿ, ಸವಿತಾ ಇಂಗಳಗಿ, ಅರುಣಾ ಬೂದಿಹಾಳ
ಸೇರಿದಂತೆ ನುರಾರು ವಿದ್ಯಾರ್ಥಿಗಳು ಇದ್ದರು.
2006-07 ನೇ ಬ್ಯಾಚ್ ದಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಸೈನಿಕರಿಗೆ ಸತ್ಕರಿಸಲಾಯಿತು.
ವರದಿ ಮಂಜು ಎಂ.ಚಿಕ್ಕಣ್ಣವರ




















