ಸೋಲುವ ಹೊತ್ತಿನಲಿ ಪ್ರೇಮಪತ್ರವ ನೆನಪಿಸಿ ಹೊಸತು ಬರೆಸಿದಿಯಾ
ಗೆಲುವ ಭರವಸೆಯಲಿ ಹೃದಯದಲಿ ಪ್ರೀತಿಯ
ಹುಚ್ಚು ಹಿಡಿಸಿದೆಯಾ
ದೊರೆಯದ ಒಲವನು ಪಡೆಯಲು ಆಗಸಕೆ
ಏಣಿ ಹಾಕದಿರೆಂದು
ಬೆರೆಯದ ಮನಸುಗಳನು ಒಂದುಗೂಡಿಸಲು
ಬಯಸಿದೆಯಾ
ಹರಸುವ ದೇವರೇ ನಮಗೆ ಶಾಪವನಿಟ್ಟು ಪರೀಕ್ಷಿಸುತಿರುವಾಗ
ಸುರಿಯುವ ಕಣ್ಣೀರಿನ ಹನಿಗಳನು
ಒರೆಸಿದೆಯಾ
ತುಳಿಯಲು ಕುತಂತ್ರಿಗಳ ದಂಡೆ ಸಾಲುಗಟ್ಟಿ
ನಿಂತಿರುವಾಗ
ಬೆಳೆಸಲು ಬೆಳಗಿನ ನೇಸರನಾಗಿ ಉದಯಿಸಿ
ಬರಲು ಆಶಿಸಿದೆಯಾ
ಧರೆಯಲಿ ಧರ್ಮ ಮಾರ್ಗದಲ್ಲಿ ಜೀವನ
ನಡೆಸಿದವಳು ಸುಗಮ
ಮರೆಯಲಿ ಅಧರ್ಮದಿಂದ ಆರ್ಭಟಿಸುವ
ಜನರ ದಂಡಿಸಿದೆಯಾ
✍️ ಸೂಗಮ್ಮ ಡಿ ಪಾಟೀಲ್ ಉತ್ನಾಳ್



















