ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ – ಗಂಗಾವತಿ ರಾಜ್ಯ ಹೆದ್ದಾರಿ 29ರ ರಸ್ತೆಯಲ್ಲಿ ಅಳವಾದ ಗುಂಡಿ : ಅಧಿಕಾರಿಗಳ ನಿರ್ಲಕ್ಷ್ಯ

ಬಳ್ಳಾರಿ / ಕಂಪ್ಲಿ : ಪಟ್ಟಣದ ಕಂಪ್ಲಿ ಹಾಗೂ ಗಂಗಾವತಿ ರಾಜ್ಯ ಹೆದ್ದಾರಿ 29ರ ಹಳೆ ಚೆಕ್ ಪೋಸ್ಟ್ ಹತ್ತಿರ ನೀರಿನ ಪೈಪ್ ಒಡೆದು ರಸ್ತೆ ಮೇಲೆ ಹರಿದು ಆಳೆತ್ತರದ ನೀರಿನ ಗುಂಡಿ ನಿರ್ಮಾಣವಾಗಿದೆ, ಈ ರಸ್ತೆಯಲ್ಲಿ ಬೃಹತ್ ಗಾತ್ರದ ಲಾರಿ, ಬಸ್, ಕಾರು, ದ್ವಿಚಕ್ರ ವಾಹನಗಳು ದಿನಂಪ್ರತಿ ನೂರಾರು ವಾಹನಗಳು ಚಲಿಸುತ್ತವೆ.
ಈ ಅಳೆತರದ ನೀರಿನ ಗುಂಡಿ ನಿರ್ಮಾಣಗೊಂಡು ಪ್ರಯಣಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ ಅನೇಕ ದಿನಗಳು ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರತಿದಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ.
ಪ್ರತಿದಿನ ರಸ್ತೆಯಲ್ಲಿ ಭಾರಿ ವಾಹನಗಳು ಚಲಿಸುತ್ತವೆ, ಈ ಗುಂಡಿ ದೊಡ್ಡ ಗುಂಡಿಯಾಗಿ ರೂಪಗೊಳ್ಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ನೀರಿನ ಪೈಪ್ ಲೈನ್ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಗುಂಡಿಯನ್ನು ಮುಚ್ಚಬೇಕೆಂದು ಜನರು ಒತ್ತಾಯಿಸಿದ್ದಾರೆ.
ರಾತ್ರಿಯ ವೇಳೆ ಬೆಳಕಿನ ಸರಿಯಾದ ವ್ಯವಸ್ತೆ ಇಲ್ಲದೆ ಇರುವುದರಿಂದ ವಾಹನ ಸವಾರರು ಒಂದು ವೇಳೆ ಗುಂಡಿಯಲ್ಲಿ ಬಿದ್ದು ಗಾಯಗೊಂಡು ಅಥವಾ ಸಾವನ್ನಪ್ಪಿದ್ದರೆ ಯಾರು ಹೊಣೆ?

” ನೀರಿನ ಪೈಪ್ ಲೈನ್ ಒಡೆದು ರಸ್ತೆ ಮೇಲೆ ಹರಿಯುತ್ತಿರುವ ನೀರನ್ನು ಆದಷ್ಟು ಬೇಗನೆ ಪೈಪ್ ಲೈನ್ ದುರಸ್ತಿಗೊಳಿಸಿ ರಸ್ತೆ ಸರಿಪಡಿಸಲಾಗುವುದು “.

  • ಬಿ. ಮಲ್ಲಿಕಾರ್ಜುನ
    ಮುಖ್ಯಾಧಿಕಾರಿ, ಪುರಸಭೆ ಕಂಪ್ಲಿ.

” ರಾಜ್ಯ ಹೆದ್ದಾರಿ 29ರ ಸಂಪರ್ಕ ಸೇತುವೆ ಕಾಮಗಾರಿಯಿಂದಾಗಿ ನೀರಿನ ಪೈಪ್ ಲೈನ್ ಹೊಡೆದಿದ್ದು ಸೇತುವೆ ಕಾಮಗಾರಿ ಮುಗಿದ ತಕ್ಷಣವೇ ಪೈಪ್ ಲೈನ್ ದುರಸ್ತಿಗೊಳಿಸಲಾಗುವುದು “.

  • ತೇಜಸ್ವಿನಿ,
    ಕಿರಿಯ ಅಭಿಯಂತರು, ಪುರಸಭೆ, ಕಂಪ್ಲಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!