ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೂಲಿಕಾರ್ಮಿಕನ ಮಗಳು ಸ್ವಾತಿ ಬಸವರಾಜ ಹೆರೂರ ಎಸ್ ಎಸ್ ಎಲ್ ಸಿ ಯಲ್ಲಿ ವಿ ಎಂ ಪ್ರೌಢಶಾಲೆಗೆ ದ್ವಿತೀಯ ಸ್ಥಾನ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಬಸವರಾಜ ಅಮರಪ್ಪ ಹೇರೂರ ಹಾಗೂ ಶೈಲಾ ಬಸವರಾಜ ಹೇರೂರು ರವರ ಸುಪುತ್ರಿ, ಸ್ವಾತಿ ಬಸವರಾಜ ಹೆರೂರ ರವರು ಹುನಗುಂದ ನಗರದ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ 2025 26ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 625ಕ್ಕೆ 584 ಅಂಕಗಳನ್ನು ಪಡೆದು 93.44% ಆ ಶಾಲೆಗೆ ದ್ವಿತೀಯ ಸ್ಥಾನ ಪಡೆಯೋದರ ಮೂಲಕ ಉತ್ತಮ ಸಾಧನೆಗೈದಿದ್ದಾಳೆ ವಿಷಯವಾರು ಅಂಕಗಳ ವಿವರ ಕನ್ನಡಕ್ಕೆ 125ಕ್ಕೆ 120 ಇಂಗ್ಲೀಷ್ 100 ಕ್ಕೆ 96 ಹಿಂದಿ 100ಕ್ಕೆ 98 ಗಣಿತ 100ಕ್ಕೆ 80 ವಿಜ್ಞಾನ 100ಕ್ಕೆ 91 ಸಮಾಜ ವಿಜ್ಞಾನ 100ಕ್ಕೆ 99 ಪಡೆದಿದ್ದಾಳೆ ಈ ವಿದ್ಯಾರ್ಥಿನಿಯು ತಾಯಿಯ ತವರುಮನೆ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ರಿಂದ ೮ ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ಕಲಿತು 9 ಹಾಗೂ 10ನೇ ತರಗತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸೌಲಭ್ಯ ಸಿಗದೆ ಉತ್ತಮ ಸಾಧನೆ ಮಾಡಿದ ಕಾರ್ಯ ಕುಮಾರಿ ಸ್ವಾತಿಯವರ ಕಾರ್ಯ ಶ್ಲಾಘನೀಯವಾಗಿದೆ.
ಕನ್ನಡದಲ್ಲಿ ಶಿಕ್ಷಣ ಕಲಿಯಲು ಹಿಂಜರಿಯುವ ಹಿಂದಿನ ವಿದ್ಯಾರ್ಥಿಗಳು ಒಂದರಿಂದ 10ನೇ ತರಗತಿವರೆಗೆ ಕನ್ನಡದಲ್ಲಿ ಕಲಿತಿದ್ದು ಅವರ ತಂದೆ ಹುನಗುಂದ ತಾಲೂಕಿನ ನಾಗೂರ ಗ್ರಾಮದವರಾಗಿದ್ದು ಒಂದು ಎಕರೆ ಜಮೀನು ಹೊಂದಿದ್ದಾರೆ ಈಗ ಅವರು ಮಕ್ಕಳ ಶಿಕ್ಷಣ ಸಲುವಾಗಿಯೇ ತಂದೆ ಹಾಗೂ ತಾಯಿ ಕೂಲಿ ಹರಿಸಿ ಗೋವಾದಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದಾರೆ ಅವರ ಎಲ್ಲ ಮಕ್ಕಳು ತಾಯಿಯ ತವರು ಮನೆ ತಿಮ್ಮಾಪುರ ಗ್ರಾಮದ ಅಜ್ಜಿ ಗಂಗಮ್ಮ ಬದಾಮಿ ಇವರ ಮನೆಯಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ.

ಶಾಲೆಯ ಶಿಕ್ಷಕರಿಂದ ಸನ್ಮಾನ: ತಾವು ಕಲಿತ ವಿಜಯ ಮಹಾಂತೇಶ ಪ್ರೌಢಶಾಲೆಯ ಮುಖ್ಯ ಗುರುಗಳಾದ ಬಸವರಾಜ ಬನಹಟ್ಟಿ ಶಿಕ್ಷಕರುಗಳಾದ ಪಿ ಸಿ ಚೌಹಾನ್ ವೀರಪ್ಪ ಕರಡಿ ಮಹಾಂತೇಶ ಮಾವಿನಕಾಯಿ ಹಾಗೂ ಸಿಬ್ಬಂದಿ ವರ್ಗ ಸಾಧನೆ ಮಾಡಿದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಯ ಅನಿಸಿಕೆ: ನನ್ನ ಸಾಧನೆಗೆ ಶಿಕ್ಷಕರ ಮಾರ್ಗದರ್ಶನವೇ ಪ್ರಮುಖ ಕಾರಣ ಪ್ರತಿಯೊಂದು ಅನುಮಾನಕ್ಕೂ ಸಹನೆಯಿಂದ ಉತ್ತರ ನೀಡಿದ ಗುರುಗಳು ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಕಾಲೇಜಿನ ಶಿಸ್ತು all helped me succeed ಎಂದು ಸ್ವಾತಿ ತನ್ನ ಸಂತೋಷ ಹಂಚಿಕೊಂಡರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!