ಚಿತ್ರದುರ್ಗದ ಮಾದಾರ ಚೆನ್ನಯ್ಯ ಮೈದಾನದಲ್ಲಿ ನಿನ್ನೆ ನೆರೆದಿದ್ದ 10 ಲಕ್ಷಕ್ಕೂ ಅಧಿಕ ಅಭಿಮಾನಿಗಳ ಸಾಗರ, ಜನನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಮೇಲಿರುವ ಅಚಲವಾದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಯಿತು.
ಮತ್ತು ಈ ಐತಿಹಾಸಿಕ ಸಮಾರಂಭವು ಯಡಿಯೂರಪ್ಪನವರ ಜನಪ್ರಿಯತೆ ಮತ್ತು ಜನಸೇವೆಯ ಪ್ರತಿಬಿಂಬವಾಯಿತು.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರ ಉಪಸ್ಥಿತಿಯಲ್ಲಿ, ನಾಡಿನ ಮೂಲೆ ಮೂಲೆಯಿಂದ ಬಂದ ರೈತ ಬಂಧುಗಳು ಮತ್ತು ಅಭಿಮಾನಿಗಳ ಸಾಕ್ಷಿಯಾಗಿ “ಬಿಎಸ್‌ವೈ ಅಭಿಮಾನೋತ್ಸವ” ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಬಿಎಸ್ವೈ ಅವರ 50 ವರ್ಷಗಳ ಸಾರ್ಥಕ ಸೇವೆಗೆ ಸಂದ ಅತಿದೊಡ್ಡ ಗೌರವ ಇದಾಗಿದೆ.
ಜನಸಾಗರದ ಮಹಾಪೂರ :
ರೈತ ನಾಯಕ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಕಟ್ಟಿದ ಧೀಮಂತ, ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಆಶಾಕಿರಣ ಯಡಿಯೂರಪ್ಪನವರನ್ನು ಕಾಣಲು, ಗೌರವ ಸಲ್ಲಿಸಲು ಲಕ್ಷಾಂತರ ಜನ ಚಿತ್ರದುರ್ಗಕ್ಕೆ ಹರಿದು ಬಂದರು. ರಸ್ತೆಗಳು ಜನರಿಂದ ತುಂಬಿ ತುಳುಕಿದವು. ಮೈದಾನ ಕಿಕ್ಕಿರಿದು ತುಂಬಿತ್ತು. ಇದು ಕೇವಲ ಸಮಾರಂಭವಲ್ಲ, ಜನಮನ ಗೆದ್ದ ನಾಯಕನಿಗೆ ಜನರೇ ನೀಡಿದ ಪಟ್ಟಾಭಿಷೇಕ.
ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದ ವಿಶೇಷ ಸಂದೇಶವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವೇದಿಕೆಯಲ್ಲಿ ಓದಿದರು. ಯಡಿಯೂರಪ್ಪ ಅವರ ನಾಯಕತ್ವವನ್ನು ಎಲ್ಲಾ ಮುಖಂಡರು ಮುಕ್ತಕಂಠದಿಂದ ಶ್ಲಾಘಿಸಿದರು.
ಅಮಿತ್ ಶಾ ಜಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಎಸ್‌ವೈ ಅವರ ತ್ಯಾಗ, ಹೋರಾಟ, ರೈತಪರ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಯಡಿಯೂರಪ್ಪನವರು ಬಿಜೆಪಿಯ ಆಧಾರಸ್ತಂಭ, ಕರ್ನಾಟಕದ ಅಭಿವೃದ್ಧಿಯ ಹರಿಕಾರ” ಎಂದು ಬಣ್ಣಿಸಿದರು.
50 ವರ್ಷದ ಸಾರ್ಥಕ ಸೇವೆಗೆ ಸಲಾಂ : ಶಿಕಾರಿಪುರದಿಂದ ವಿಧಾನಸೌಧದವರೆಗೆ, ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿಯವರೆಗೆ ಬಿಎಸ್‌ವೈ ಅವರ ಪಯಣ ಹೋರಾಟದ ಕಥನ. ರೈತರ ಸಾಲ ಮನ್ನಾ, ಭಾಗ್ಯಲಕ್ಷ್ಮೀ ಯೋಜನೆ, ವಿದ್ಯಾರ್ಥಿನಿಯರಿಗೆ ಸೈಕಲ್, ಕಲ್ಯಾಣ ಕರ್ನಾಟಕದ ಅಭಿವೃದ್ಧಿ – ಇವೆಲ್ಲವೂ ಅವರ ಆಡಳಿತದ ಮೈಲಿಗಲ್ಲುಗಳು. ಅದೇ ರೀತಿ
ರೈತರ ಪರ ಹೋರಾಟದಿಂದ ಆರಂಭವಾಗಿ, ಕರ್ನಾಟಕದ ಅಭಿವೃದ್ಧಿಗೆ ದಿಕ್ಕು ತೋರಿದ ದಿಟ್ಟ ನಾಯಕತ್ವದ ಮೂಲಕ ಶ್ರೀ ಯಡಿಯೂರಪ್ಪನವರು ಜನಮನಗಳಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ಬಡವರ ಕಲ್ಯಾಣ, ನೀರಾವರಿ ಯೋಜನೆಗಳು ಹಾಗೂ ಸಂಘಟನೆಯ ಬಲವರ್ಧನೆಯಲ್ಲಿ ಅವರ ಕೊಡುಗೆ ಅನನ್ಯ.
ಅಭಿಮಾನೋತ್ಸವ ಅವರ 50 ವರ್ಷದ ರಾಜಕೀಯ ಬದುಕಿಗೆ, ಜನಸೇವೆಗೆ ಸಂದ ಅತಿದೊಡ್ಡ ಗೌರವ, ಜನಮನ್ನಣೆಗೆ ಸಾಕ್ಷಿಯಾಯಿತು.
ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೋರಾಟಗಾರ, ರೈತ ಬಂಧು ಎಂದು ಜನಮಾನಸದಲ್ಲಿ ಉಳಿದಿರುವ ಬಿಎಸ್‌ವೈ ಅವರ ಸಾಧನೆಗಳನ್ನು ಕೊಂಡಾಡಲಾಯಿತು.ಬಿಎಸ್‌ವೈ ಅವರ ಮೇಲಿರುವ ಅಪಾರ ಅಭಿಮಾನವನ್ನು ಸಾಬೀತುಪಡಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಮಠಾಧೀಶರುಗಳು, ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಪ್ರತಿಪಕ್ಷ ನಾಯಕರು, ಸಂಸದರು, ಶಾಸಕರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಈ ಅಭಿಮಾನೋತ್ಸವವು ಬಿಎಸ್‌ವೈ ಅವರ ಸುದೀರ್ಘ ರಾಜಕೀಯ ಪಯಣದಲ್ಲಿ ಒಂದು ಮೈಲಿಗಲ್ಲಾಗಿ ನಿಂತಿದೆ. “ಜನರ ವಿಶ್ವಾಸವೇ ನನ್ನ ಶಕ್ತಿ” ಎಂಬ ಸಂದೇಶವನ್ನು ಜೀವನಪೂರ್ತಿ ಸಾರಿದ ಯಡಿಯೂರಪ್ಪನವರು ಅನೇಕ ಕಾರ್ಯಕರ್ತರಿಗೆ ಪ್ರೇರಣೆಯಾಗಿದ್ದಾರೆ. ಕರ್ನಾಟಕದ ರಾಜಕೀಯದಲ್ಲಿ ಅವರ ಹೆಸರು ಸದಾ ಸುವರ್ಣ ಅಕ್ಷರಗಳಲ್ಲಿ ಉಳಿಯಲಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು.
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ್



















