ತೆರೆದಾಗ ಮುಂಬಾಗಿಲು ಸುಪ್ರಭಾತದಲಿ
ಉದುರಿತ್ತು ಹೂದಳಗಳು ಹಜಾರದಲಿ
ಹೆಕ್ಕಿ ತುಂಬಿದೆನದನು ಎನ್ನ ಕರದಲಿ
ಚಿವುಟಿ ತಂದೆ ದುರಂದದೆಲೆಯ ಗಿಡದಲಿ
ಬಿಡಿಸಿದೆ ಶ್ವೇತ ತುಂಬೆಯ ತೆನೆಯಲಿ
ಜೊತೆಯಲಿತ್ತು ಕಾಶಿತುಂಬೆ ಬಳಿಯಲಿ
ಜೋಡಿಸಿದೆ ಎಲ್ಲವ ಸೃಜನಶೀಲತೆಯಲಿ
ಮೂಡಿತು ಸುಲಲಿತ ಚಿತ್ತಾರ ಕಾವ್ಯದಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















