ಸಾಲುಗಿಡದ ಮೊಗ್ಗಿನ ಗೊಂಚಲೊಂದು ಕೆಸರಲಿತ್ತು
ಅಚಾನಕ್ಕಾಗಿ ಒಮ್ಮೆ ನನ್ನ ಪಾದದ ಬಳಿ ಸಿಲುಕಿತ್ತು
ತಕ್ಷಣದಿ ಕೈಯಲಿ ಮೇಲೆತ್ತಿ ನೀರಲಿ ಸ್ವಚ್ಛಗೊಳಿಸಿತ್ತು
ಬಳಿಯಲಿದ್ದ ಮತ್ತೊಂದು ಪುಟ್ಟ ಪುಷ್ಪಗಳು ಕರೆದಿತ್ತು
ಬಿಡಿಬಿಡಿಯಾಗಿ ಬೇರ್ಪಡಿಸಿ ಬೆರಳುಗಳು ಜೋಡಿಸಿತು
ಮನೆಯಂಗಳದಿ ರಂಗೋಲಿಯ ಚಿತ್ತಾರವಾಗಿ ಮೂಡಿತು
ಸುಲಲಿತ ಪದಗಳ ಪೋಣಿಸಲು ಕಾವ್ಯ ಧಾರೆ ಹರಿಯಿತು
ಕಲಾಭಿಮಾನಿಗಳ ಮನದಂಗಳದಿ ಸುಪ್ರಭಾತವಾಗಿ ಮೊಳಗಿತು
- ಲಲಿತಾ ಕೆ ಆಚಾರ್, ಬೆಂಗಳೂರು




















