ಆಸ್ತಿ 7
ತಾಯಿ
ನನ್ನ ತಾಯಿ ಅನಕ್ಷರಸ್ಥಳು, ಆದರೆ ಅವಳು ಸರಳ. ಸ್ವಾವಲಂಬಿ, ಹಾಗೂ ಕಷ್ಟಸಹಿಷ್ಣು ಆಗಿದ್ದಳು. ಅವಳು ತನ್ನ ಅನಕ್ಷರಸ್ಥೆಯ ಬಗ್ಗೆ ಯಾವತ್ತೂ ಗೊಣಗಿಕೊಂಡವಳಲ್ಲ. ಅವಳ ಕೆಲಸಗಳು ಅವಳ ಮಾತಿಗಿಂತ ಹೆಚ್ಚಿನದನ್ನು ಹೇಳುತ್ತಿದ್ದವು. ಅವಳು ಯಾವಾಗಲೂ ಒಂದಿಲ್ಲೊಂದು ಮನೆ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದಳು.
ಅವಳು ಅಕ್ಷರಸ್ಥಳಲ್ಲದಿದ್ದರೂ ಅವಳ ಕಣ್ಣು ಯಾವಾಗಲೂ ಅವಳ ಆರು ಮಕ್ಕಳ ಅರೋಗ್ಯ, ಸ್ವಚ್ಛತೆಯ ಬಗ್ಗೆ ಇರುತ್ತಿತ್ತು. ನನಗೆ ನೆನಪಿದೆ ನಾವು ಆಟವಾಡಿ ಮನೆಗೆ ಬಂದ ಮೇಲೆ, ನಾವು ಮುಖ, ಕೈ, ಕಾಲು ತೊಳೆದುಕೊಳ್ಳದೇ ಒಳ ಬರುವಂತಿರಲಿಲ್ಲ. ಈ ಸಂಗತಿಯ ಬಗ್ಗೆ ಅವಳು ತುಂಬಾ ಕಟ್ಟು ನಿಟ್ಟಾಗಿದ್ದಳು ಹಾಗೂ ಅವಳು ನಾವು ಆಲಸಿಗಳಾಗಲು ಬಿಡುತ್ತಿರಲಿಲ್ಲ. ವರ್ಷದ ಬಹು ಭಾಗ ಉಷ್ಣತೆಯಿಂದ ಕೂಡಿದ್ದು, ನನಗೆ ನೆನಪಿದ್ದಂತೆ ಅವಳು ಬಜಾಯಿಸಿ ಹೇಳಿದ ಮೇಲೆ ನಾನು ಆಟವಾಡಿ ಬಂದೊಡನೇ ಮುಖ, ಕೈ, ಮೊಳಕಾಲಿನವರೆಗೆ ಕಾಲು ತೊಳೆದುಕೊಂಡರೆ ಮನಸ್ಸು ಅಹ್ಲಾದಕರವಾಗಿರುತ್ತಿತ್ತು.
ಎಳವೆಯಲ್ಲಿ ತಿದ್ದು ಎಂಬ ಒಂದು ಗಾದೆ ಮಾತಿದೆ. ಆರೋಗ್ಯ, ಸ್ವಚ್ಛತೆ ವಿಷಯದಲ್ಲಿ ಈ ಗಾದೆ ಮಾತಿನ ಆಸ್ತಿಯನ್ನು ನಮ್ಮ ತಾಯಿ ನಮಗೆ ಕೊಟ್ಟು ನಮ್ಮನ್ನು ಒಳ್ಳೆಯ ನಾಗರಿಕರನ್ನಾಗಿ ಬೆಳೆಸಿದ್ದಾರೆ.
ಥೇಟ್ ನಿಮ್ಮ ತಾಯಿಯ ಹಾಗೆ ಸರ್. ಇದ್ದಾರೆ. ೧೦೦ವರ್ಷ. ತುಂಬಾ ಮುಪ್ಪಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾಳೆ. ನಿಮ್ಮ ನಿಜವಾದ ಆಸ್ತಿ ಓದತಾ ಇದ್ದೇನೆ… ತುಂಬ ಹಾರ್ಟ್ ಟಚ್ಚಿಂಗ್ ಇದೆ ಸರ್
- Shankar Halagatti, Dharwad
ನಮ್ಮ. ತಾಯಿ ಇದ್ದಾರೆ.
ನಿಮ್ಮ ತಾಯಿಯಂತೆಯೇ, ಅಥವಾ ಎಲ್ಲಾ ತಾಯಂದಿರಂತೆ ಕಷ್ಟ ಸಹಿಷ್ಣು, ಶಿಸ್ತು, ಮಕ್ಕಳಿಗೆ ಶಿಸ್ತು ಕಲಿಸುವಲ್ಲಿ ಕಾಠಿಣ್ಯ, ಪ್ರೀತಿಯವಳು.
ಭಾಷೆ, ಸಾಹಿತ್ಯ, ಸಂಗೀತ ನನ್ನ ಆಸಕ್ತಿ.
- Smt. Shanta Nagamangala, Bangalore
ನಮ್ಮ ತಾಯಿ ತಂದಿ ಕಲಸಿದ ಆ ಲಕ್ಷ್ಮಣಗಳು ಈಗ ನಮ್ಮ ಜೀವನದಲ್ಲಿ ಎಷ್ಟೋ ಉಪಯೋಗಬರುತ್ತಿದೆ.
- Mogilipuri Giribabu, Tirupathi
My mother can read & write kannada. She has completed her
:primary 2nd class. ಮಾತ್ರಭ್ಯೋ ನಮಹ.
- Dr. K N Suryanarayana, Bangalore
ನಿಮ್ಮ ಅನಿಸಿಕೆ ಮತ್ತು ಅನುಭವ ಬಹುತೇಕ ಹಿಂದಿನ ಪೀಳಿಗೆಯ ತಾಯಂದಿರಿಗೆ ಅನ್ವಯಿಸುವ ಸತ್ಯ. ನನ್ನ ತಾಯಿ ಪೂರ್ಣ ಅನಕ್ಷರಸ್ಥಳಲ್ಲ. ಶಿಸ್ತು ಮತ್ತು ನಿರಂತರ ಕಲಿಕೆ ಆಕೆಯ ವ್ರತ. ಸುಮಾರು 80 ವರ್ಷ ನಾವಿದ್ದ ರಸ್ತೆಯ ಬಡ ಮಕ್ಕಳಿಗೆ ನನ್ನ ತಂದೆಯ ಸಂಪಾದನೆಯಲ್ಲಿ ಶಾಲೆ ಫೀಸ್ ಕಟ್ಟಿದ ದಾನಶೀಲೆ ನಮ್ಮಮ್ಮ. -ಶೇಷಣ್ಣ. Sheshachandrika
- ಪ್ರಮೋದ್ ಕುಲಕರ್ಣಿ




















