ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಂಜೆ ಸುಮಾರು 4 ಗಂಟೆಗೆ ಗುಡುಗು, ಗಾಳಿ ಸಹಿತ ಭಾರೀ ಮಳೆ ಆಗಿ ತುಂಬಾ ಅನಾಹುತ ಸೃಷ್ಟಿ ಆಗಿದೆ. ರಭಸದ ಗಾಳಿಯಿಂದಾಗಿ ರಸ್ತೆಗೆ ಮರಗಳು ಬಿದ್ದು ಸಂಚಾರ ಅಸ್ಥವ್ಯಸ್ತವಾಗಿ ಕೆಲವು ಕಡೆ ವಾಹನಗಳು ಬದಲಿ ಮಾರ್ಗದಲ್ಲಿ ಸಂಚಾರಿಸಿದವು. ಹಾಗೂ ಕೆಲವು ಕಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ತೀರ್ಥಹಳ್ಳಿ ಪಟ್ಟಣ ಹಾಗೂ ಸುತ ಮುತ್ತಲಿನ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿ ಅಪಾರ ಹಾನಿ ಉಂಟಾಗಿದೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತುಂಬಾ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ.
ವರದಿ : ಪ್ರಸಾದ್ ಹೆಚ್. ಬಿ . ತೀರ್ಥಹಳ್ಳಿ.




















