ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ: ಬೂದುಗುಪ್ಪ ಗ್ರಾಮದಲ್ಲಿ ನಮ್ಮ ಹಳ್ಳಿ ಕಲಾ ಸಂಭ್ರಮ ಸಹಾಯಕ ನಿರ್ದೇಶಕ ಬಿ. ನಾಗರಾಜ್

ಸಿರುಗುಪ್ಪ – ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಭಿನಯ ಕಲಾ ಕೇಂದ್ರ ಹಳ್ಳಿಗಳಲ್ಲಿ ಏರ್ಪಡಿಸಿರುವುದು ಶ್ಲಾಘನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು ಸಂಘದ ಅಧ್ಯಕ್ಷರಾದ ಕೆ ಜಗದೀಶ್ ಅವರು ಹೊಸ ನಾಟಕಗಳನ್ನು ರಚಿಸಿ ಹಳ್ಳಿಗಳಲ್ಲಿ ನಿರಂತರ ಕಲಾ ಪ್ರದರ್ಶನ ಮಾಡುತ್ತಿದ್ದಾರೆ. ಬೂದುಗುಪ್ಪ ಗ್ರಾಮಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಇಲಕಲ್ ಉಮಾ ರಾಣಿ ಜಿಲಾನಿ ಭಾಷಾ ಭಾವಳ್ಳಿ ರೇಣುಕಾರಂತಹ ಹಿರಿಯ ಕಲಾವಿದರನ್ನು ಆಹ್ವಾನಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು ಅಭಿನಯ ಕಲಾ ಕೇಂದ್ರ ಸಿರುಗುಪ್ಪ ತಾಲೂಕಿನ ಬೂದುಗುಪ್ಪ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಏರ್ಪಡಿಸಿದ ನಮ್ಮ ಹಳ್ಳಿ ಕಲಾ ಸಂಭ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಧ್ಯರಾತ್ರಿಯವರೆಗೆ ಪ್ರದರ್ಶನಗೊಂಡ ವಿವಿಧ ಕಾರ್ಯಕ್ರಮಗಳು ಜನಮನ ಸೂರೆ ಗೊಂಡವು ಹಿರಿಯ ಕಲಾವಿದ ಇಲಕಲ್ ಉಮಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷರಾದ ವಿಶ್ವನಾಥ ಸಾಹುಕಾರ ರಂಗಭೂಮಿ ಕಲಾವಿದರಾದ ಭಾವಳ್ಳಿ ರೇಣುಕಾ ಕೂಡ್ಲಿಗಿ ದಿವ್ಯ ಉಪಸ್ಥಿತರಿದ್ದರು. ಎಸ್ ಕೆ ಸಮೀರ್ ಅವರ ಏಕ ವ್ಯಕ್ತಿ ನೃತ್ಯ ಡಿ ಎನ್ ರೇಣುಕಾ ಬಾವಳ್ಳಿ ಅವರ ರಂಗಗೀತೆ ಎಸ್ ಕೆ ಜಿವಾನಿ ಭಾಷಾ ತಂಡದ ಸಮೂಹ ನೃತ್ಯ ಆಕರ್ಷಣೀಯವಾಗಿದ್ದವು. ರಂಗಗೀತೆಗೆ ಉತ್ತನೂರು ರಾಮಣ್ಣ ರವರ ಹಾರ್ಮೋನಿಯಂ ಸಾಥ್ ಹಳೆಯ ಹಾಡುಗಳನ್ನು ನೆನಪಿಸಿಕೊಂಡರು ಅತ್ತೆ ಸೊಸೆಯರ ಸನ್ನಿವೇಶಗಳಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದ ಗೀತಾ ಹೂಗಾರ ವಿರಚಿತ ಸಂಗಯ್ಯನ ಸಂಸಾರ ನಾಟಕದಲ್ಲಿ ಇಲಕಲ್ ಉಮಾ ಕೂಡ್ಲಿಗಿ ದಿವ್ಯ ಹಾಗೂ ಬಿ ಗುರುರಾಜ ರಾವ್ ಅಭಿನಯಿಸಿ ಜನ ಮೆಚ್ಚುಗೆ ಪಡೆದರು ಹಳ್ಳಿಗರ ಅಚ್ಚುಮೆಚ್ಚಿನ ಗಾಳಿ ಮಲ್ಲಯ್ಯ ವಿರಚಿತ ಶ್ರೀ ರೇಣುಕಾ ಮಹಾತ್ಮ ಬಯಲಾಟಕ್ಕೆ ಶಿಳ್ಳೆ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು. ಬೂದುಗುಪ್ಪ ಎರಿಸ್ವಾಮಿಯವರ ಹಾರ್ಮೋನಿಯಂ ವಾದನ ರೋಮಾಂಚಕವಾಗಿತ್ತು ರೇಣುಕಾ ಪಾತ್ರದಲ್ಲಿ ಹಿರೇಹಾಳು ಅನಿತಾ ಮೇನಕಾ ಪಾತ್ರದಲ್ಲಿ ರಾರಾವಿ ನೂರ್ ಜಾ ಜಮದಗ್ನಿ ಪಾತ್ರದಲ್ಲಿ ಶಂಕರ ಬಂಡೆ ಪೀರ ಸಾಬ್ ಪರಶುರಾಮ ಪಾತ್ರದಲ್ಲಿ ಬಸರಕೋಡು ಗಾದಿಲಿಂಗ ಕಾರ್ತ್ಯವೀರಾರ್ಜುನ ಪಾತ್ರದಲ್ಲಿ ಕೂರಿಗನೂರು ರಮೇಶ ಪ್ರಾಸ ಬದ್ಧ ಮಾತುಗಳಿಗೆ ಜೀವ ತುಂಬಿದರು ತಬಲಾ ಗೋಟೂರು ಗಾದಿಲಿಂಗ ರಿದಂ ಪ್ಯಾಡ್ ವಿಜಯಕುಮಾರ್ ಹೆಚ್ ವೀರಾಪುರ ಈ ಉತ್ಸಾಹಿ ಯುವಕರ ಅಬ್ಬರದ ಸಂಗೀತ ಬಯಲಾಟದ ಕುಣಿತಕ್ಕೆ ಹುರಿದುಂಬಿಸಿದವು. ಶ್ರೀ ಬಸವೇಶ್ವರ ರಂಗ ಸಜ್ಜಿಕೆಯ ವೇಷಭೂಷಣಗಳು ವರ್ಣ ಮಯವಾಗಿದೆ ಎಂದು ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷರಾದ ವಿಶ್ವನಾಥ ಸಾಹುಕಾರ ತಿಳಿಸಿದರು. ಸಾಮಾಜಿಕ ಕಾರ್ಯಕರ್ತ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಇದ್ದರು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!