ಬಾಗಲಕೋಟೆ /ಅಮೀನಗಡ: ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದಲ್ಲಿ ದಿನಾಂಕ 18ರಂದು ಸೋಮವಾರ ಹೇಮ ಯುವಕ ಸಂಘದವರು ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತೋತ್ಸವ, ಹಾಗೂ ಗ್ರಾಮದ ವಿಜಯ ಮಹಾಂತ ಮಹಾಂತೇಶ್ವರ ಮಠದ ಪೀಠಾಧಿಪತಿಗಳಾದ ಡಾ. ಗುರು ಮಹಾಂತ ಶ್ರೀಗಳಿಗೆ ಗ್ರಾಮಸ್ಥರ ಸನ್ಮಾನ ಕಾರ್ಯಕ್ರಮದ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಜಯಂತೋತ್ಸವದ ನಿಮಿತ್ಯ ಭಾವಚಿತ್ರ ಮೆರವಣಿಗೆ: ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆಯನ್ನು ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಗೊಂಡು ಮಹಿಳೆಯರು ಕಳಸ ಕನ್ನಡಿ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜಿ ಸಲ್ಲಿಸಿದರು. ವಿಜಯ ಮಹಾಂತೇಶ್ವರ ಮಠಕ್ಕೆ ಬಂದು ತಲುಪಿತು.
ಮೆರವಣಿಗೆಯ ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗೆ ಬೀದಿಗಳಲ್ಲಿ ಸಂಚರಿಸಿತು.
- ಕರುನಾಡ ಕಂದ ಸುದ್ದಿ




















