ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಾರಿ ಹೋದ ಸಂವಿಧಾನ ಪೀಠಿಕೆ

ಇತ್ತೀಚೆಗೆ ಡಾ. ಹೆಚ್. ಸಿ. ಮಹದೇವಪ್ಪ ಅವರು ಸರ್ಕಾರಿ ಕಚೇರಿಗಳು ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು ಎಂದು ಕರೆ ನೀಡಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಸಮಯೋಚಿತವಾದ ಅಭಿಪ್ರಾಯವಾಗಿದೆ ಏಕೆಂದರೆ ಇಂದು ನಾವು ತಂತ್ರಜ್ಞಾನ ಶಿಕ್ಷಣ ಆರ್ಥಿಕತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ವೇಗವಾಗಿ ಮುಂದೆ ಸಾಗುತ್ತಿದ್ದರೂ ನಮ್ಮ ದೇಶದ ಮೂಲ ತತ್ವಗಳಾದ ಸಮಾನತೆ ಸ್ವಾತಂತ್ರ್ಯ ನ್ಯಾಯ ಮತ್ತು ಭ್ರಾತೃತ್ವ ಎಂಬ ಮೌಲ್ಯಗಳನ್ನು ದಿನನಿತ್ಯದ ಬದುಕಿನಲ್ಲಿ ಮರೆಯುತ್ತಿರುವ ಸ್ಥಿತಿ ಕಂಡು ಬರುತ್ತಿದೆ.
ಸಂವಿಧಾನದ ಪೀಠಿಕೆ ಎಂದರೆ ಕೇವಲ ಕೆಲವು ಸಾಲುಗಳ ಪಾಠವಲ್ಲ ಅದು ಭಾರತದ ಆತ್ಮ. ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಜನರ ಹಕ್ಕುಗಳು ಯಾವುವು ಸರ್ಕಾರದ ಕರ್ತವ್ಯ ಏನು ಪ್ರಜಾಪ್ರಭುತ್ವದ ಅರ್ಥವೇನು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಹೇಳಿಕೊಡುವ ಮಹಾನ್ ಘೋಷಣೆಯಾಗಿದೆ ನಾವು ಭಾರತ ದೇಶದ ಜನರು ಎಂದು ಆರಂಭವಾಗುವ ಪೀಠಿಕೆ ಪ್ರತಿಯೊಬ್ಬ ಭಾರತೀಯನಿಗೂ ರಾಷ್ಟ್ರದೊಂದಿಗೆ ಇರುವ ನೈತಿಕ ಬಾಂಧವ್ಯವನ್ನು ನೆನಪಿಸುತ್ತದೆ.
ಆದರೆ ಇಂದಿನ ವಾಸ್ತವಿಕ ಪರಿಸ್ಥಿತಿಯನ್ನು ಗಮನಿಸಿದರೆ ಅನೇಕ ಸರ್ಕಾರಿ ಕಾರ್ಯಕ್ರಮಗಳು ಶಾಲಾ ಕಾಲೇಜುಗಳ ಉತ್ಸವಗಳು ರಾಷ್ಟ್ರೀಯ ಆಚರಣೆಗಳು ಇಲಾಖೆಯ ಸಭೆಗಳು ನಡೆಯುತ್ತಿವೆ. ವೇದಿಕೆ ಅಲಂಕಾರ ಅತಿಥಿಗಳ ಭಾಷಣ ಸನ್ಮಾನ ಘೋಷಣೆಗಳು ಎಲ್ಲವೂ ನಡೆಯುತ್ತವೆ. ಆದರೆ ಸಂವಿಧಾನದ ಪೀಠಿಕೆಯನ್ನು ಓದುವುದು ಮಾತ್ರ ಅನೇಕ ಕಡೆಗಳಲ್ಲಿ ಮರೆತು ಹೋಗುತ್ತಿದೆ ( ಉದಾಹರಣೆ ) ನಾನು ಶಿಕ್ಷಣ ಪಡೆಯುತ್ತಿರುವ ಕಾಲೇಜಿನಲ್ಲಿ ಹಲವಾರು ವಿಭಾಗಗಳು ಇವೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಲಿರುತ್ತಾರೆ ಮತ್ತು ಮಾಡುತ್ತಿದ್ದಾರೆ ಸಂವಿಧಾನ ಪೀಠಿಕೆ ಕಡ್ಡಾಯವಾಗಿ ಓದಬೇಕು ಎಂದ ದಿನದಿಂದ ಹಿಡಿದು ಇಲ್ಲಿಯವರೆಗೂ ಕೇವಲ ಮೂರರಿಂದ ನಾಲ್ಕು ಬಾರಿಯಷ್ಟೇ ತೋರ್ಪಡಿಕೆಗೆ ಸಂವಿಧಾನ ಪೀಠಿಕೆ ಓದಿರುವುದು ನನ್ನ ಕಣ್ಣಂಚಿನ ನೆನಪಿನಲ್ಲಿದೆ ಅಲ್ಲಿಂದ ಇಲ್ಲಿಯವರೆಗೂ ಹಲವಾರು ಕಾರ್ಯಕ್ರಮಗಳು ನಡೆದರೂ ಸಹಿತ ಕಾಲೇಜಿನಲ್ಲಿ ಈ ಸಂವಿಧಾನ ಪೀಠಿಕೆ ಎಂಬುವುದು ಮರೀಚಿಕೆಯಾಗಿದೆ. ಕೆಲವೊಮ್ಮೆ ಅದು ಕೇವಲ ಆಚರಣೆಯಾಗಿ ಉಳಿದಿದೆ ಕೆಲವೊಮ್ಮೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ ಇದು ಕೇವಲ ಒಂದು ಪದ್ಧತಿಯ ಕೊರತೆಯಲ್ಲ ಇದು ಸಂವಿಧಾನದ ಮೌಲ್ಯಗಳನ್ನೇ ಕಡೆಗಣಿಸುವ ಮನೋಭಾವದ ಪ್ರತಿಬಿಂಬವಾಗಿದೆ ಭಾರತದಂತಹ ಬಹುಭಾಷಾ ಬಹುಧರ್ಮ ಬಹುಸಂಸ್ಕೃತಿಯ ದೇಶದಲ್ಲಿ ಎಲ್ಲರನ್ನು ಒಂದೇ ನೂಲುಹಾರದಲ್ಲಿ ಕಟ್ಟಿಹಾಕುವ ಶಕ್ತಿ ಸಂವಿಧಾನಕ್ಕಿದೆ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖವಾಗಿರುವ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯ ವಿಚಾರ ಅಭಿವ್ಯಕ್ತಿ ನಂಬಿಕೆ ಧರ್ಮ ಮತ್ತು ಆರಾಧನೆಯ ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವ ಎಂಬ ಪದಗಳು ಕೇವಲ ಅಲಂಕಾರಿಕ ಪದಗಳಲ್ಲ ಅವು ನಮ್ಮ ಸಮಾಜದ ದಿಕ್ಕು ತೋರಿಸುವ ದೀಪ ಸ್ತಂಭಗಳಾಗಿವೆ
ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಪೀಠಿಕೆ ಓದಿದರೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮಾತ್ರವಲ್ಲ ಸಂವಿಧಾನದ ಅರಿವು ಬೆಳೆಯುತ್ತದೆ ಇಂದಿನ ಯುವಜನತೆ ಮೊಬೈಲ್ ಸಾಮಾಜಿಕ ಜಾಲತಾಣಗಳು ಮತ್ತು ಸ್ಪರ್ಧಾತ್ಮಕ ಬದುಕಿನ ಒತ್ತಡದಲ್ಲಿ ಬೆಳೆದು ಬರುತ್ತಿದೆ ಅವರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವುದು ಅತ್ಯಗತ್ಯ ಪೀಠಿಕೆ ಓದುವುದರಿಂದ ವಿದ್ಯಾರ್ಥಿಗಳು ನನ್ನ ಹಕ್ಕುಗಳಷ್ಟೇ ಅಲ್ಲ ನನ್ನ ಕರ್ತವ್ಯಗಳೂ ಇವೆ ಎಂಬ ಅರಿವನ್ನು ಪಡೆಯುತ್ತಾರೆ ಜಾತಿ ಧರ್ಮ ಭಾಷೆ ವರ್ಗ ಎಂಬ ಬೇಧಗಳಿಗಿಂತ ಮನುಷ್ಯತ್ವವೇ ಮುಖ್ಯ ಎಂಬ ಚಿಂತನೆ ಬೆಳೆಸಲು ಇದು ಸಹಾಯಕವಾಗುತ್ತದೆ
ಸರ್ಕಾರಿ ಕಚೇರಿಗಳಲ್ಲಿ ಪೀಠಿಕೆ ಓದುವುದಕ್ಕೆ ಇನ್ನೂ ಹೆಚ್ಚಿನ ಅರ್ಥವಿದೆ ಸರ್ಕಾರದ ನೌಕರರು ಜನಸೇವಕರು ಅವರು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿರಬೇಕು ಆದರೆ ಕೆಲವು ಸಂದರ್ಭಗಳಲ್ಲಿ ಅಧಿಕಾರ ದುರುಪಯೋಗ ಭ್ರಷ್ಟಾಚಾರ ಜನರೊಂದಿಗೆ ಅನ್ಯಾಯ ಜಾತಿ ಧರ್ಮದ ಆಧಾರದ ಭೇದಭಾವದಂತಹ ಘಟನೆಗಳು ನಡೆಯುತ್ತಿರುವುದು ಕಂಡು ಬರುತ್ತದೆ ಇಂತಹ ಸಂದರ್ಭದಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆಯನ್ನು ಓದುವುದು ಕೇವಲ ವಿಧಿವಿಧಾನವಾಗದೇ ನೈತಿಕ ಹೊಣೆಗಾರಿಕೆಯನ್ನು ನೆನಪಿಸುವ ಪ್ರಕ್ರಿಯೆಯಾಗಬಹುದು.
ಇಂದು ಅನೇಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತದೆ ಧ್ವಜಾರೋಹಣ ನಡೆಯುತ್ತದೆ ಗಣ್ಯರನ್ನು ಸನ್ಮಾನಿಸಲಾಗುತ್ತದೆ ಆದರೆ ಸಂವಿಧಾನದ ಪೀಠಿಕೆಗೆ ಬೇಕಾದಷ್ಟು ಗೌರವ ಸಿಗುತ್ತಿಲ್ಲ. ರಾಷ್ಟ್ರಭಕ್ತಿ ಎಂದರೆ ಕೇವಲ ಘೋಷಣೆ ಕೂಗುವುದು ಅಥವಾ ಧ್ವಜ ಹಿಡಿಯುವುದಲ್ಲ ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ದೇಶಭಕ್ತಿ ಸಂವಿಧಾನವನ್ನು ಗೌರವಿಸದೇ ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವುದು ಅರ್ಥಹೀನವಾಗುತ್ತದೆ.
ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ವೇಳೆ ಒಂದು ಮಹತ್ವದ ಎಚ್ಚರಿಕೆ ನೀಡಿದ್ದರು ಉತ್ತಮ ಸಂವಿಧಾನವಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗದಿದ್ದರೆ ಅದು ಯಶಸ್ವಿಯಾಗುವುದಿಲ್ಲ ಈ ಮಾತು ಇಂದಿಗೂ ಅಕ್ಷರಶ ಸತ್ಯವಾಗಿದೆ ನಾವು ಸಂವಿಧಾನವನ್ನು ಕೇವಲ ಪುಸ್ತಕದ ಪುಟಗಳಲ್ಲಿ ಇರಿಸಿ ಜೀವನದಲ್ಲಿ ಅನುಸರಿಸದಿದ್ದರೆ ಅದರ ಅರ್ಥವೇ ನಷ್ಟವಾಗುತ್ತದೆ.
ಸಂವಿಧಾನದ ಪೀಠಿಕೆಯನ್ನು ಓದುವುದರಿಂದ ಸಮಾಜದಲ್ಲಿ ಸಹಿಷ್ಣುತೆ ಪರಸ್ಪರ ಗೌರವ ಮತ್ತು ಪ್ರಜಾಪ್ರಭುತ್ವದ ಸಂಸ್ಕೃತಿ ಬಲವಾಗುತ್ತದೆ ವಿಶೇಷವಾಗಿ ಇಂದಿನ ಕಾಲದಲ್ಲಿ ಸಮಾಜದಲ್ಲಿ ಧರ್ಮ ಜಾತಿ ಭಾಷೆ ಮತ್ತು ರಾಜಕೀಯದ ಹೆಸರಿನಲ್ಲಿ ವಿಭಜನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಪೀಠಿಕೆ ಜನರನ್ನು ಒಗ್ಗೂಡಿಸುವ ಶಕ್ತಿಯಾಗಿ ಕೆಲಸ ಮಾಡಬಹುದು ನಾವು ಭಾರತ ದೇಶದ ಜನರು ಎಂಬ ಪದಗಳು ಎಲ್ಲ ಭೇದಗಳಿಗಿಂತ ರಾಷ್ಟ್ರವೇ ಮೇಲು ಎಂಬ ಸಂದೇಶವನ್ನು ನೀಡುತ್ತವೆ.
ಕೆಲವರು ಪೀಠಿಕೆ ಓದುವುದರಿಂದ ಏನು ಬದಲಾವಣೆ ಆಗುತ್ತದೆ ಎಂದು ಪ್ರಶ್ನಿಸಬಹುದು ಆದರೆ ಪ್ರತಿಯೊಂದು ದೊಡ್ಡ ಬದಲಾವಣೆಯೂ ಚಿಕ್ಕ ಅಭ್ಯಾಸಗಳಿಂದಲೇ ಆರಂಭವಾಗುತ್ತದೆ ಶಾಲೆಯಲ್ಲಿ ಪ್ರಾರ್ಥನೆ ರಾಷ್ಟ್ರಗೀತೆ ಪ್ರತಿಜ್ಞೆ ಇವೆಲ್ಲವೂ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪಾತ್ರವಹಿಸುತ್ತವೆ ಅದೇ ರೀತಿ ಸಂವಿಧಾನದ ಪೀಠಿಕೆ ಓದುವುದೂ ನಾಗರಿಕ ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಗಿದೆ
ಹೀಗಾಗಿ ಸರ್ಕಾರ ಈ ವಿಚಾರವನ್ನು ಕೇವಲ ಸರ್ಕ್ಯುಲರ್‌ಗಳಲ್ಲಿ ಸೀಮಿತಗೊಳಿಸದೇ ನಿಜವಾದ ಜನಜಾಗೃತಿ ಕಾರ್ಯಕ್ರಮವನ್ನಾಗಿ ರೂಪಿಸಬೇಕು ಶಾಲಾ ಪಠ್ಯಕ್ರಮಗಳಲ್ಲಿ ಪೀಠಿಕೆಯ ಅರ್ಥವನ್ನು ಆಳವಾಗಿ ಪರಿಚಯಿಸಬೇಕು ಸರ್ಕಾರಿ ಕಚೇರಿಗಳಲ್ಲಿ ಪೀಠಿಕೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು ಪ್ರತಿಯೊಂದು ಅಧಿಕೃತ ಕಾರ್ಯಕ್ರಮವೂ ಪೀಠಿಕೆ ಓದುವುದರಿಂದಲೇ ಆರಂಭವಾಗಬೇಕು ಇದು ಕೇವಲ ನಿಯಮವಲ್ಲ ಸಂವಿಧಾನದ ಮೇಲಿನ ಗೌರವದ ಪ್ರತೀಕವಾಗಬೇಕು.

ಕೊನೆಗೆ ಹೇಳುವುದಾದರೆ ಸಂವಿಧಾನದ ಪೀಠಿಕೆ ದೇಶದ ಪ್ರತಿಯೊಬ್ಬ ನಾಗರಿಕನ ಬದುಕಿಗೆ ದಿಕ್ಕು ತೋರಿಸುವ ನೈತಿಕ ಘೋಷಣಾಪತ್ರವಾಗಿದೆ ಅದನ್ನು ಓದುವುದು ಕೇವಲ ಕಾರ್ಯಕ್ರಮದ ಆರಂಭಿಕ ವಿಧಿಯಲ್ಲ ಅದು ಪ್ರಜಾಪ್ರಭುತ್ವದ ಪ್ರತಿಜ್ಞೆ ಸಂವಿಧಾನದ ಮೌಲ್ಯಗಳನ್ನು ಮರೆತು ಮಾಡುವ ಯಾವುದೇ ಕಾರ್ಯಕ್ರಮವೂ ಆತ್ಮವಿಲ್ಲದ ಆಚರಣೆಯಂತೆಯೇ ಆಗುತ್ತದೆ ಆದ್ದರಿಂದ ಸರ್ಕಾರಿ ಕಚೇರಿಗಳುಶಾಲೆಗಳು ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಸಂವಿಧಾನದ ಪೀಠಿಕೆಗೆ ಯೋಗ್ಯ ಸ್ಥಾನಮಾನ ನೀಡಬೇಕು. ಅದೇ ನಿಜವಾದ ಅಂಬೇಡ್ಕರ್‌ರಿಗೆ ಗೌರವ ಅದೇ ನಿಜವಾದ ರಾಷ್ಟ್ರಸೇವೆ ಎಂಬುವುದು ನನ್ನ ಮನನ….?

  • ಮೇಘರಾಜ ಪತ್ರಿಕೋದ್ಯಮ ವಿದ್ಯಾರ್ಥಿ, ಎಸ್ ಕೆ ಎನ್ ಜಿ ಕಾಲೇಜ್ ಗಂಗಾವತಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!