ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಉಚಿತ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಅಕ್ಷರ ಫೌಂಡೇಶನ್ ಶೈಕ್ಷಣಿಕ ಸ್ವಯಂಸೇವಕರ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮಮಟ್ಟದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಜರಗಿತು.
ಈ ಸಂದರ್ಭದಲ್ಲಿ ಹೂವಿನ ಗಿಡಕ್ಕೆ ನೀರು ಉಣಿಸುವ ಮೂಲಕ ಸಭೆ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಗಿರಿಗೌಡ ಪಾಟೀಲ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಈ ನಮ್ಮ ಗಣಿತ ಕಲಿಕಾ ಆಂದೋಲನದಿಂದ ಕೆಂಗಾನೂರ, ಪಟ್ಟಿಹಾಳ್, ಬೆಳವಡಿ ,ಬೂದಿಹಾಳ ಮತ್ತು ಮೂಗಬಸವ ಆಯ್ದ ಗ್ರಾಮಗಳ ಶಾಲೆ ಮಕ್ಕಳನ್ನು ನಮ್ಮ ಗಣಿತ ಕಲಿಕಾ ಆಂದೋಲನದಿಂದ ಮುಂದಿನ ದಿನಮಾನಗಳಲ್ಲಿ ಗಣಿತ ವಿಷಯದಲ್ಲಿ ಮಕ್ಕಳು ಅತಿ ಹೆಚ್ಚು ಉತ್ತೀರ್ಣರಾಗಬೇಕೆನ್ನುವುದು ಈ ನಮ್ಮ ಆಂದೋಲನದ ಉದ್ದೇಶ ಎಂದರು.
ಕನ್ನಡ ಗಂಡು ಮಕ್ಕಳ ಶಾಲೆಯ ಅಧ್ಯಕ್ಷರಾದ ಶ್ರೀ ಈರಯ್ಯ ದುಂಡಯ್ಯ ರೇವಯ್ಯನವರ ನಮ್ಮ ಶಾಲೆಯ ಮಕ್ಕಳು ಗಣಿತ ವಿಷಯವನ್ನು ಅತಿ ಬಹಳ ಶ್ರದ್ಧೆಯಿಂದ ಕಲಿಯಬೇಕು ಎಂದು ಹೇಳಿದರು.
ಅದೇ ರೀತಿ ಕನ್ನಡ ಗಂಡು ಮಕ್ಕಳ ಶಾಲೆಯ ಶಿಕ್ಷಕಿಯರಾದ ಬಡಸ್ ಶಿಕ್ಷಕಿಯರು ಈ ದಿನಮಾನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಗಣಿತ ವಿಷಯವನ್ನು ಕಲಿಯಬೇಕು ಏಕೆಂದರೆ ನಾವು ಒಂದು ವಸ್ತುವನ್ನು ಅಂಗಡಿಗೆ ಖರೀದಿಸಲು ಹೋದಾಗ ಒಂದು ವಸ್ತುವಿನ ಬೆಲೆ ಗೊತ್ತಾದರೆ ನಾವು ಅದನ್ನು ಸರಿಯಾಗಿ ವ್ಯವಹರಿಸಲು ಸಮರ್ಪಕವಾಗಿರುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಎರಡು ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗಣಿತ ಕಲಿಕಾ ಸ್ವಯಂಸೇವಕರು, ಸದಸ್ಯರು, ಊರಿನ ಗುರು ಹಿರಿಯರು, ಗಣಿತ ಕಲಿಕಾ ಆಂದೋಲನದ ಶಿಕ್ಷಕರಾದ ಗಿರಿ ಗೌಡ ಪಾಟೀಲ್ ಅವರಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ಗಂಡು ಮಕ್ಕಳ ಶಾಲೆಯ ಅಧ್ಯಕ್ಷರು ಈರಯ್ಯ ದುಂಡಯ್ಯ ರೇವಯ್ಯನವರ್, ಬಸಪ್ಪ ಶೆಟ್ಟೆಪ್ಪ ಪೂಜ್ಯರ, ಈರಪ್ಪ ಶೀಲವಂತರ್, ಭೀಮಪ್ಪ ದೇಗಾವಿ, ಸೋಮಲಿಂಗ ಬಾಗೇವಾಡಿ, ಮಡಿವಾಳಪ್ಪ ಸಾವಿ, ಮಂಜುನಾಥ್ ಬಾರ್ಕಿ, ಮಡಿವಾಳಪ್ಪ ಬಳಿಗಾರ, ಶಿಕ್ಷಕರು ಬಡಸ್ ಶಿಕ್ಷಕಿಯರು, ಸ್ವಯಂಸೇವಕರು, ಸದಸ್ಯರು ಸಂಗಯ್ಯ ಚಚಡಿ, ಮಂಜುನಾಥ ಹುಕ್ಕೇರಿ ಮತ್ತು ಗಿರಿ ಗೌಡ್ ಪಾಟೀಲ್ ಅವರು ಉಪಸ್ಥಿತರಿದ್ದರು.

ವರದಿ ಮುನ್ನಾ ಹುಜರತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!