ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು :ಕ್ಯಾಂಟಿನ್ ಬಂದ್

ವಿರಾಜಪೇಟೆಯ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು ಕರವೇ ಸ್ವಾಭಿಮಾನಿ ಬಣ (ರಿ.) ತಂಡದಿಂದ ಪರಿಶೀಲನೆ ಮತ್ತು ಕ್ಯಾಂಟಿನ್ ಬಂದ್ ! .

ವಿರಾಜಪೇಟೆ : ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣಕ್ಕೆ ದೂರುಗಳ ಸುರಿಮಳೆ ಬರುತ್ತಿದ್ದು ಇದರ ಬಗ್ಗೆ ಇಂದು ಕರವೇ ಕಾರ್ಯಕರ್ತರು ವಿರಾಜಪೇಟೆಯ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಮತ್ತು ಸ್ವಚ್ಚತೆ ಪಾಲಿಸದಿರುವುದನ್ನು ನೋಡಿ ಅಲ್ಲಿನ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಪುರಸಭೆಯ ಸ್ವಚ್ಛತಾ ಅಧಿಕಾರಿ ಕೋಮಲ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ಅವ್ಯವಸ್ಥೆಯನ್ನು ಒಪ್ಪಿಕೊಂಡರು. ಅಲ್ಲಿ ಕುಡಿಯುವ ನೀರಿನ ಟ್ಯಾಂಕ್ ಅಶುಚಿಯಿಂದ ಕೂಡಿತ್ತು , ನೆಲ ಮತ್ತು ಕೊಠಡಿಯನ್ನು ಸ್ವಚ್ಚಗೊಳಿಸಿರಲಿಲ್ಲ ಮತ್ತು ಊಟದ ತಟ್ಟೆಗಳು ಗಲೀಜಾಗಿದ್ದು, ಅಡುಗೆ ಕೋಣೆಗೆ ಕಾಲಿಡಲು ಸಹ ಆಗದಂತಹ ಪರಿಸ್ಥಿತಿ ಇತ್ತು. ಕೊಳೆತ ಮೊಟ್ಟೆ ಮತ್ತು ಆಹಾರ ಪದಾರ್ಥಗಳು ಫ್ರಿಡ್ಜ್ ನಲ್ಲಿದ್ದವು‌.
ಆಹಾರ ತಿನಿಸುಗಳನ್ನು ತೆರೆದಿಟ್ಟ ಕಾರಣ ನೊಣಗಳು ಮುತ್ತಿಡುತ್ತಿದ್ದವು. ಇದರಿಂದ ಆರೋಗ್ಯ ಸಮಸ್ಯೆಗಳಿಗೆ ನಾಂದಿಯಾಗುತ್ತದೆಯೆಂದು ಕರವೇ ಪದಾಧಿಕಾರಿಗಳು ಮನವರಿಕೆ ಮಾಡಿದರು. ಇದೇ ಸಮಯದಲ್ಲಿ ಐದು ರೂಪಾಯಿಯ ಊಟಕ್ಕೆ ಹತ್ತು ರೂಪಾಯಿ ಹೆಚ್ಚುವರಿ ತೆಗೆದುಕೊಳ್ಳುತ್ತಾರೆಂದು ಮತ್ತು ಆಹಾರದ ಗುಣಮಟ್ಟ ಕಳಪೆಯಾಗಿದೆಯೆಂದು ಸಾರ್ವಜನಿಕರು ಸ್ಥಳದಲ್ಲಿಯೇ ಆರೋಪಿಸಿದರು.

ಕೊನೆಗೆ ಅಧಿಕಾರಿಗಳು ಅಲ್ಲಿನ ಉಸ್ತುವಾರಿಗಳು ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಇದರಲ್ಲಿ ಸಂಬಂದಪಟ್ಟ ಇಲಾಖೆಯ ನಿರ್ಲಕ್ಷ್ಯವೂ ಎದ್ದು ಕಾಣುತ್ತಿತ್ತು. ಮುಂದಿನ ದಿನಗಳಲ್ಲಿ ಸ್ವಚ್ಚವಾಗಿಡುವ ಭರವಸೆ ನೀಡಿದರು. ಈಗಿನ ತಪ್ಪು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿ ತಕ್ಷಣವೇ ಇಂದಿರಾ ಕ್ಯಾಂಟೀನಿಗೆ ಬೀಗ ಮುದ್ರೆ ಹಾಕಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರು ಫ್ರಾನ್ಸಿಸ್ ಡಿಸೋಜಾ, ಜಿಲ್ಲಾ ಕಾರ್ಯದರ್ಶಿಗಳಾದ ಸುರೇಶ್, ಜಿಲ್ಲಾ ಸಲಹೆಗಾರರಾದ ಸಜೀಲ್ ಕುಮಾರ್ , ಜಿಲ್ಲಾ ಕಾರ್ಯಾಧ್ಯಕ್ಷರಾದ ಪ್ರಿತುನ್ ಪೂವಣ್ಣ ಅಯ್ಯನೆರವಂಡ , ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಬೆಲ್ಲು ಕಾರ್ಯಪ್ಪ ಹಾಗೂ ವಿರಾಜಪೇಟೆಯ ಸಬ್ ಇನ್ಸ್ ಪೆಕ್ಟರ್ ಶ್ರೀ ಪ್ರಮೋದ್, ಕಾವೇರಪ್ಪ ಸೇರಿದಂತೆ ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!