ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ 13

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ನಮ್ಮ ತಂದೆಯವರು 1966-68 ರಲ್ಲಿ ಬಿಜಾಪುರದ ( ಈಗ ವಿಜಯಪುರ) ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ, ನಮ್ಮ ಬಾಡಿಗೆ ಮನೆ ತುಂಬಾ ಹಳೆಯದಾಗಿತ್ತು. ಅದಕ್ಕೆ ಕೊಳಾಯಿ ನೀರಿನ ಸೌಕರ್ಯ ಇರದಿದ್ದರಿಂದ, ನಾವು ಸಾರ್ವಜನಿಕ ನಲ್ಲಿಯಿಂದ ನೀರು ಹಿಡಿದು ತರಬೇಕಾಗಿತ್ತು. ಅದಕ್ಕೆ ವಿದ್ಯುತ್ ಸೌಕರ್ಯ ಕೂಡ ಇರಲಿಲ್ಲ. ಮನೆಯ ಮಾಲೀಕ ಪೂನಾದಲ್ಲಿ ( ಪುಣೆ ) ಇದ್ದು, ಮನೆಯ ಬಾಡಿಗೆಯನ್ನು ವಸೂಲು ಮಾಡಲು ಒಬ್ಬ ಮಧ್ಯವರ್ತಿಯನ್ನು ನೇಮಿಸಿದ್ದ. ಹೀಗಾಗಿ ಮನೆ ನಮಗೆ ಯಾವುದೇ ಕಾರಣಕ್ಕೂ ಹಿಡಿಸಿರಲಿಲ್ಲ. ಆಗ ಎಲ್ಲ ಸರಕಾರಿ ನೌಕರರಿಗೆ ಮನೆಗಳು ಸಿಗುವುದು ದುಸ್ತರವಾಗಿತ್ತು. ನಮ್ಮ ತಂದೆಯವರಿಗೆ ತಮ್ಮ ಮಿತ ಆದಾಯದಲ್ಲಿ ಇದಕ್ಕಿಂತ ಒಳ್ಳೆಯ ಮನೆ ಹಿಡಿಯುವುದು ಸಾಧ್ಯವಿರಲಿಲ್ಲ. ಬೆಲೆಗಳು ಒಂದೇ ಸವನೆ ದಿನದಿಂದ ದಿನಕ್ಕೆ ಏರುತ್ತಿದ್ದವು. ನಮ್ಮ ತಂದೆಯವರಿಗೆ 8 ಜನರ ಹೊಟ್ಟೆ ತುಂಬಿಸಬೇಕಾಗಿತ್ತು. ಎಲ್ಲಾ ಮಕ್ಕಳ ಬಟ್ಟೆ ಪೂರೈಸ ಬೇಕಾಗಿತ್ತು ಹಾಗೂ ಅವರ ಶಿಕ್ಷಣದ ದುಬಾರಿ ವೆಚ್ಚವನ್ನು ನೋಡಿಕೊಳ್ಳಬೇಕಾಗಿತ್ತು. ಅವರಿಗೆ ನಾಲ್ಕು ಮಕ್ಕಳ ಶಿಕ್ಷಣದ ಫೀಸ್ ಕಟ್ಟಬೇಕಾಗಿತ್ತು ಹಾಗೂ ಮಕ್ಕಳ ಟೆಕ್ಸ್ಟ್ ಬುಕ್, ನೋಟ್ ಬುಕ್ ಗಳನ್ನು
ಕೊಡಿಸಬೇಕಾಗಿತ್ತು.

ಅವರಿಗೆ ಬೇಸಿಕ್ ಪೇ. Rs. 205/-, D.A. Rs.137/-, HRA Rs.15.90, ಪರ್ಸನಲ್ ಪೇ Rs.7/- =Rs.364.90 ಬರುತ್ತಿತ್ತು.

ಅವರು ಸರಕಾರಿ ನೌಕರರ ಸಹಕಾರಿ ಸಂಘ, ಬಿಜಾಪುರದ ಮೆಂಬರ್ ಆದರು. ಮನೆಯ ಖರ್ಚು ವೆಚ್ಚಗಳಿಗಾಗಿ ಸಂಘದಿಂದ ಸಾಲವನ್ನು ಆಗಾಗ ತೆಗೆದುಕೊಳ್ಳುತ್ತಿದ್ದರು ಹಾಗೂ ಆ ಸಾಲವನ್ನು ಪುನರ್ ನವೀಕರಿಸಿಕೊಳ್ಳುತ್ತಿದ್ದರು. ಅವರ ಆರ್ಥಿಕ ಸ್ಥಿತಿಗತಿಗಳು ಅಷ್ಟೇನೂ ಚೆನ್ನಾಗಿ ಇರಲಿಲ್ಲ.

ಅವರ ನಿಜವಾದ ಆಸ್ತಿಯೆಂದರೆ ನೈತಿಕ ಮೌಲ್ಯ ಹಾಗೂ ಎಷ್ಟೇ ಕಷ್ಟಗಳು ಬಂದರೂ ಎದುರಿಸುವ ಧೈರ್ಯ ಆಗಿತ್ತು.

asset 13 Sir, it gives so much motivation to read your real life experiences. Thank you for sharing

  • Basavaraj Pattan.

Asset 13 Very interesting reading. I started in Seshadrpuram college in the year 1972 with Rs 337 per month and even ventured to marry in 1973 and got my son in 1974 and my wife started working in 1975. But days were pleasant. Please write a book on these experiences.

-Prof K E Radhakrishna, Bangalore

  • .
  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!