
ರಾಯಚೂರು ಜಿಲ್ಲೆಯ ಲಿಂಗಸುಗೂರಿನ
ಶ್ರೀ ಉಟಕನೂರು ಬಸವಲಿಂಗ ತಾತ ಶಿಕ್ಷಣ ಟ್ರಸ್ಟ್ ನ ಶ್ರೀಸಂಜೀವ ಶಿಕ್ಷಣ ಮಹಾವಿದ್ಯಾಲಯದಲ್ಲಿ ( ಬಿ.ಇಡಿ) ತೃತೀಯ ಸೆಮಿಸ್ಟರ್ನ ಪ್ರಶಿಕ್ಷಣಾರ್ಥಿಗಳಿಂದ ಪಠ್ಯ ಚಟುವಟಿಕೆಯ ಭಾಗವಾಗಿ ದಿನಾಂಕ: 23-05-2026 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಾಟಕ ಪ್ರದರ್ಶನ ಯಶಸ್ವಿಯಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನೊಳಗೊಂಡ ನಾಟಕಗಳು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಬಿ.ಇಡಿ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು, ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸುವುದು, ಭ್ರಷ್ಟಾಚಾರ ನಿರ್ಮೂಲನೆ, ಬಾಲ್ಯವಿವಾಹ ಕಾನೂನು ಬಾಹಿರ ಮತ್ತು ವರದಕ್ಷಿಣೆ ಪಿಡುಗು ಬಗ್ಗೆ ನಾಟಕಗಳನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಎನ್.ಯು.ಬಿ.ಟಿ ಟ್ರಸ್ಟ್ನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಂಜೀವಕುಮಾರ್ ಕಂದಗಲ್ ರವರು ಮಾತನಾಡುತ್ತಾ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ನಾಟಕದ ಪಾತ್ರಧಾರಿಗಳು ಅದರಲ್ಲಿ ನಾವುಗಳು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಬೇಕು ಅದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ವೆಂಕಟೇಶ್ ಕವಿತಾಳ , ಶ್ರೀಜಾವೀದ್ ಹುಸೇನ್ ಪ್ರಾಂಶುಪಾಲರು ಹಾಗೂ ಶ್ರೀ ಅಮರೇಶ್ ಗೌಡೂರು ಪ್ರಾಚಾರ್ಯರು ಹಾಗೂ ಉಪನ್ಯಾಸಕರುಗಳಾದ ಶ್ರೀ ವೆಂಕಟೇಶ್ ಪೂಜಾರಿ ,ಶ್ರೀ ಚನ್ನಬಸವ, ಶ್ರೀಮತಿ ಸವಿತಾ ಪವಾರ
ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವೀರೇಶ್ , ಪ್ರಾರ್ಥನೆಯನ್ನು ಕುಮಾರಿ ಸಹನಾ ವೆಂಕಟೇಶ್ , ವಂದನಾರ್ಪಣೆಯನ್ನು ಶ್ರೀಮತಿ ನೀಲಾoಬಿಕಾ ರವರು ನೆರವೇರಿಸಿದರು.
ವರದಿ ಶ್ರೀ ವೆಂಕಟೇಶ ನವಲಕಲ್




















